Latest

ಹಲಸಿನ ಹಣ್ಣಲ್ಲಿ ವಿಷವಿಟ್ಟ ಕ್ರೂರಿಗಳು; ಮೂರು ದನಗಳು ಸಾವು

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಕೇರಳದಲ್ಲಿ ಅನಾನಸ್ ನಲ್ಲಿ ಪಟಾಕಿಯಿಟ್ಟು ತಿನ್ನಿಸಿ ಆನೆಯನ್ನು ಹತ್ಯೆ ಮಾಡಿದ ಘಟನೆ ಮಾಸುವ ಮುನ್ನವೇ ಹಲಸಿನ ಹಣ್ಣಿನಲ್ಲಿ ವಿಷ ಬೆರೆಸಿ ಮೂರು ದನಗಳನ್ನು ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಬಸರವಳ್ಳಿಯಲ್ಲಿ ದನಗಳು ತೋಟಕ್ಕೆ ನುಗ್ಗುತ್ತವೆ ಎಂಬ ಕಾರಣಕ್ಕೆ ಹಲಸಿನ ಹಣ್ಣಿಗೆ ವಿಷ ಹಾಕಿಟ್ಟಿದ್ದರು. ಇದನ್ನು ತಿಂದು ಮೂರು ದನಗಳು ಸಾವನ್ನಪ್ಪಿವೆ.

Home add -Advt

ಕಿಟ್ಟೇಗೌಡ, ಮಧು ಎಂಬುವರಿಗೆ ಸೇರಿದ ದನಗಳು ಹಲಸಿನ ಹಣ್ಣು ತಿಂದು ಮೃತಪಟ್ಟಿದ್ದು, ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button