

ಪ್ರಗತಿವಾಹಿನಿ ಸುದ್ದಿ: ಹೋಟೆಲ್ ಇಡ್ಲಿ ಅಸುರಕ್ಷಿತ ಎಂಬ ವರದಿ ಬೆನ್ನಲ್ಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದ ಎಲ್ಲಾ ಹೋಟೆಲ್, ಉಪಹಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ವಿವಿಧೆಡೆ ಹೋಟೆಲ್ ಇಡ್ಲಿ ಅಸುರಕ್ಷಿತ ಎಂದು ಆಹಾರ ಇಲಾಖೆ ಪ್ರಯೋಗಾಲಯದ ವರದಿ ಬಂದಿದೆ. ಇಡ್ಲಿ ತಯಾರಿಸುವಾಗ ಪ್ಲಾಸ್ಟಿಕ್ ಕವರ್ ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಿಸಿಶಾಖದಿಂದ ಹಾನಿಕಾರಕ ರಾಸಾಯನಿಕವನ್ನು ಅದು ಬಿಡುಗಡೆ ಮಾಡುತ್ತದೆ. ಇಂತಹ ಇಡ್ಲಿ ಸೇವನೆಯಿಂದ ಕ್ಯಾನ್ಸರ್ ನಂತಹ ಕಾಯಿಲೆ, ಹೃದಯಾಘಾತ, ಬಂಜೆತನ, ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ವರದಿ ನೀಡಿದ್ದರು.
ಬೆಂಗಳೂರಿನ ವಿವಿಧೆಡೆ 500 ಇಡ್ಲಿ ಮಾದರಿ ಸಂಗ್ರಹಿಸಲಾಗಿದ್ದು, 35 ಕಡೆಗಳಲ್ಲಿನ ಇಡ್ಲಿ ಅಸುರಕ್ಷಿತ ಎಂಬುದು ದೃಧಪಟ್ಟಿದೆ. ಇನ್ನಷ್ಟು ಇಡ್ಲಿ ಮಾದರಿ ವರದಿ ಬರಬೇಕಿದೆ. ಈ ಬೆಳವಣಿಗೆ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇನ್ಮುಂದೆ ಯಾವುದೇ ಹೋಟೆಲ್, ಉಪಹಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಕವರ್, ಬಾಕ್ಸ್ ಗಳನ್ನು ಬಳಸುವಂತಿಲ್ಲ. ಇಡ್ಲಿ ತಯಾರಿಸುವಾಗ ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವುದರಿಂಗ ಗ್ರಾಹಕರ ಅರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹೋಎಲ್, ಉಪಹಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ