Belagavi NewsBelgaum NewsKannada NewsKarnataka NewsNational

*ಹುಬ್ಬಳ್ಳಿ–ದಾದರ ರೈಲು ಇನ್ಮುಂದೆ ಖಾನಾಪುರದಲ್ಲೂ ನಿಲುಗಡೆ*

ಪ್ರಗತಿವಾಹಿನಿ ಸುದ್ದಿ: ಪ್ರಯಾಣಿಕರ ಅನುಕೂಲಕ್ಕಾಗಿ SSS ಹುಬ್ಬಳ್ಳಿ–ದಾದರ–SSS ಹುಬ್ಬಳ್ಳಿ ಎಕ್ಸ್‌ಪ್ರೆಸ್ ಖಾನಾಪುರದಲ್ಲಿ ಒಂದು ನಿಮಿಷ ನಿಲುಗಡೆಯಾಗಲಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಖಾನಾಪುರ (KNP) ರೈಲು ನಿಲ್ದಾಣದಲ್ಲಿ ದಿನಾಂಕ 15.09.2025 ರಿಂದ ರೈಲು ಸಂಖ್ಯೆ 17317/17318 SSS ಹುಬ್ಬಳ್ಳಿ–ದಾದರ–SSS ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲುಗಳಿಗೆ ಒಂದು ನಿಮಿಷ ನಿಲುಗಡೆ ನೀಡಿದೆ. ರೈಲು ಸಂಖ್ಯೆ 17317 (SSS ಹುಬ್ಬಳ್ಳಿ–ದಾದರ) 17:59 ಕ್ಕೆ ಖಾನಾಪುರ ತಲುಪಿ 18:00 ಕ್ಕೆ ನಿರ್ಗಮಿಸಲಿದೆ. ಅದೇ ರೀತಿ ದಿನಾಂಕ 16.09.2025 ರಂದು ರೈಲು ಸಂಖ್ಯೆ 17318 (ದಾದರ–SSS ಹುಬ್ಬಳ್ಳಿ) 08:40 ಕ್ಕೆ ಖಾನಾಪುರ ತಲುಪಿ 08:41 ಕ್ಕೆ ನಿರ್ಗಮಿಸಲಿದೆ. ಪ್ರಯಾಣಿಕರು ಈ ನಿಲುಗಡೆಯ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಕೋರಲಾಗಿದೆ.

Home add -Advt

Related Articles

Back to top button