Karnataka News
*ಸಹೋದರ ಜಗಳ ಬಿಡಿಸಲೆಂದು ಹೋಗಿದ್ದ ತಾಯಿಯನ್ನೇ ಇರಿದು ಕೊಂದ ಮಕ್ಕಳು*

ಪ್ರಗತಿವಾಹಿನಿ ಸುದ್ದಿ: ಸಹೋದರರಿಬ್ಬರ ಜಗಳ ಬಿಡಿಸಲೆಂದು ಬಂದಿದ್ದ ತಾಯಿಯನ್ನೇ ಮಕ್ಕಳಿಬ್ಬರು ಹತ್ಯೆ ಮಾಡಿರುವ ಘೋರ ಘಟನೆ ನಡೆದಿದೆ.
ಹುಬ್ಬಳ್ಳಿ ತಾಲೂಕಿನ ತೊರವಿಹಕ್ಕಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪದ್ಮಾ (46) ಮಕ್ಕಳಿಂದಲೇ ಕೊಲೆಯಾದ ಮಹಿಳೆ.
ಪದ್ಮಾ ಮಕ್ಕಳಾದ ಮಂಜುನಾಥ್ ಹಾಗೂ ಲಕ್ಷ್ಮಣ ಕಟಿಂಗ್ ಶಾಪ್ ಇಟ್ಟಿಕೊಂಡಿದ್ದರು. ಕಟಿಂಗ್ ಶಾಪ್ ನಲ್ಲಿ ಬಂದ ಹಣ ಹಂಚಿಕೆ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಜಗಳ ವಿಕೋಪಕ್ಕೆ ತಿರುಗಿದೆ.
ಮಕ್ಕಳಿಬ್ಬರ ಜಗಳ ಬಿಡಿಸಲೆಂದು ಪದ್ಮಾ ಮಧ್ಯಪ್ರದೇಶಿಸಿದ್ದು, ಈ ವೇಳೆ ಮಂಜುನಾಥ್ ಕಿಟಕಿಯ ಗಾಜಿನಿಂದ ತಾಯಿಯ ಹೊಟ್ಟೆಗೆ ಇರಿದಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾದ ಪದ್ಮಾ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪದ್ಮಾ ಕೊನೆಯುಸಿರೆಳೆದಿದ್ದಾರೆ.
ಮಕ್ಕಳಾದ ಮಂಜುನಾಥ್ ಹಾಗೂ ಲಕ್ಷ್ಮಣ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



