Latest

ಕ್ಲಾಸ್ ರೂಂ ನಲ್ಲಿಯೇ ಮಧ್ಯ ಸೇವನೆ ಮಾಡಿದ ವಿದ್ಯಾರ್ಥಿನಿಯರು: ಅಮಾನತು ಮಾಡಿದ ಆಡಳಿತ ಮಂಡಳಿ

ಪ್ರಗತಿವಾಹಿನಿ ಸುದ್ದಿ; ಕಾಂಚಿಪುರಂ; ಕಾಲೇಜು ವಿದ್ಯಾರ್ಥಿನಿಯರು ತರಗತಿಯೊಳಗಡೆಯೇ ಕಂಠಪೂರ್ತಿ ಮಧ್ಯಪಾನ ಮಾಡಿರುವ ಘಟನೆ ತಮಿಳುನಾಡಿನ ಕಾಂಚಿಪುರಂನಲ್ಲಿ ನಡೆದಿದೆ.

ಕಾಂಚಿಪುರಂನ ಎನತ್ತೂರ್ ನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಒಟ್ಟು ಹತ್ತು ವಿದ್ಯಾರ್ಥಿನಿಯರು ಇದ್ದ ತರಗತಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಮಧ್ಯ ಸೇವನೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Home add -Advt

ಕೂಲ್ ಡ್ರಿಂಕ್ಸ್ ಬಾಟಲಿಯಲ್ಲಿ ಮಧ್ಯ ಬೆರೆಸಿ ಸೇವಿಸಿದ್ದಾರೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ಗೊತ್ತಾಗುತ್ತಿದ್ದಂತೆ ವಿದ್ಯಾರ್ಥಿನಿಯರ ಪೋಷಕರಿಗೆ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿನಿಯರಿಗೆ ವೈದ್ಯಕೀಯ ಸಮಾಲೋಚನೆ ನಡೆಸುವಂತೆಯೂ ಸೂಚನೆ ನೀಡಲಾಗಿದೆ.

ಮದ್ಯ ಸೇವನೆ ಮಾಡಿದ ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಲಾಗಿದೆ.

ಬೆಳಗಾವಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ

Related Articles

Back to top button