Belagavi NewsBelgaum NewsKarnataka News

*ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಪ್ರಯುಕ್ತ ಹುಕ್ಕೇರಿ ಶ್ರೀಗಳಿಗೆ ಗೌರವ ಸನ್ಮಾನ*

ಪ್ರಗತಿವಾಹಿನಿ ಸುದ್ದಿ: ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಹುಕ್ಕೇರಿ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ತಾಲೂಕಿನ ಯರಗಟ್ಟಿ ಗ್ರಾಮದ ಬಸವೇಶ್ವರ ಮಂದಿರದ ಸಭಾಂಗಣದಲ್ಲಿ ಅಭಿನಂದಿಸಿ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹುಕ್ಕೇರಿ ಜನಪ್ರಿಯ ಶಾಸಕ ನಿಖಿಲ್ ಕತ್ತಿ ಮಾತನಾಡಿ ನಮ್ಮ ಗುರುಗಳಾದ ಚಂದ್ರಶೇಖರ ಶಿವಾಚಾರ್ಯರಿಂದ ಇವತ್ತು ನಮ್ಮ ತಾಲೂಕು ರಾಷ್ಟ್ರಮಟ್ಟದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ನಮ್ಮ ತಾಲೂಕಿನಲ್ಲಿ ಇಂತಹ ಗುರುಗಳು ಇದ್ದಾರೆ ಎನ್ನುವ ಹೆಮ್ಮೆ ಎಂದ ಅವರು ವೀರಶೈವ ಲಿಂಗಾಯತ ರಿಗೆ ಮಾರ್ಗದರ್ಶನ ಮಾಡುತ್ತ ಸಮಾಜದ ಐಕ್ಯತೆಗೆ ಗುರುಗಳು ಯಾವಾಗಲು ಒಳ್ಳೆಯ ಸಂದೇಶವನ್ನು ನೀಡುತ್ತಾ ಬಂದಿದ್ದಾರೆ. ಇವರಿಂದ ಇನ್ನೂ ಹೆಚ್ಚಿನ ಕಾರ್ಯಗಳು ಆಗಲಿ ಎಂದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು 1981ರಲ್ಲಿ ಅಖಿಲ ಭಾರತ ಶಿವಾಚಾರ್ಯ ಸಂಸ್ಥೆ ಆರಂಭ ವಾಯಿತು. ಇಡೀ ದೇಶದಲ್ಲಿರುವ ಶಿವಾಚಾರ್ಯರ ಹಿರೇಮಠಗಳ ಎಲ್ಲ ವೀರಶೈವ ಲಿಂಗಾಯತ ಸಮಾಜದ ಮಾತೃ ಸಂಸ್ಥೆ ಅಖಿಲ ಭಾರತ ಶಿವಾಚಾರ್ಯ ಸಂಸ್ಥೆ ಆಗಿದೆ. ಇದರಲ್ಲಿ ಮೊದಲು ದಾವಣಗೆರೆಯ ಡಾ. ಸಜ್ಯೋಜಾತ ಶಿವಾಚಾರ್ಯ ಸ್ವಾಮಿಗಳು ನಂತರ ಯಡಿಯೂರು ತಾವರಕೆರೆಯ ಶ್ರೀ ರೇಣುಕ ಶಿವಾಚಾರ್ಯ ಸ್ವಾಮಿಗಳವರು. ಮೂರನೇದವರಾಗಿ ಕಲಾದಗಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು. ನಾಲ್ಕನೇ ದವರಾಗಿ ಮುಕ್ತಿಮಂದಿರದ ಶ್ರೀ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳವರು. ಸಿಂದಗಿಯ ಡಾ. ಪ್ರಭು ಸಾರಂಗ ದೇವ ಶಿವಾಚಾರ್ಯ ಸ್ವಾಮಿಗಳವರು ಆಯ್ಕೆ ಆಗಿದ್ದಾರೆ. ಇದರಲ್ಲಿ ನಮಗೆ ರಾಷ್ಟ್ರೀಯ ಉಪಅಧ್ಯಕ್ಷ ಸ್ಥಾನವನ್ನು ನೀಡಿದ್ದು ಮೂರು ವರ್ಷಗಳ ವರೆಗೆ ಸಮರ್ಪಕವಾಗಿ ಕಾರ್ಯವನ್ನು ನಿರ್ವಹಿಸುತ್ತೇವೆ ಎಂದರು.

Home add -Advt

ಬೆಲ್ಲದ ಬಾಗೇವಾಡಿಯ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ್ ಕತ್ತಿ ಮಾತನಾಡಿ ಚಂದ್ರಶೇಖರ ಶಿವಾಚಾರ್ಯರು ಶ್ರಮಮಹಿಸಿ ಮಠವನ್ನು ಕಟ್ಟಿದ್ದಾರೆ. ಅವರು ಒಂದೇ ಮಥ, ಪಥ, ಜಾತಿ-ಪಂಗಡಕ್ಕೆ ಸೀಮಿತ ವಾಗದೆ ಎಲ್ಲರನ್ನೂ ಪ್ರೀತಿಸುವ ಸಮನ್ವಯಿಗಳು ಎಂದರು.

ಹೊಳೆಯಮ್ಮ ದೇವಸ್ಥಾನದ ಪ್ರದಾನ ಅರ್ಚಕ ನಿ, ಶಿಕ್ಷಕ ಹೆಚ್ ಎಲ್ ಪೂಜಾರಿ ಅವರು ಶ್ರೀಗಳ ಬಗ್ಗೆ ಮಾತನಾಡುತ್ತ ಶ್ರೀಗಳಿಗೆ ವಿಶೇಷವಾಗಿ ಎಲ್ಲರೂ ನಾವು ನಡೆದುಕೊಳ್ಳುತ್ತೇವೆ. ಕಾರಣ ಅವರು ಎಲ್ಲರ ಬಂಧುವಾಗಿ ನಿಂತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಊರಿನ ಹಿರಿಯರಾದ ವಿರುಪಾಕ್ಷಿ ಚೌಗಲಾ, ಬಿ ಆರ್ ಪಾಟೀಲ್, ಶಿವಾನಂದ್ ಎಸ್ ನೊಗನಿಹಾಳ್, ಸುರೇಶ್ ಜಿನರಾಳ, ಶ್ರೀಶೈಲ್ ಕೈತಾಳ್, ಶಿವಾನಂದ್ ಬಾಗೇವಾಡಿ, ಈರಪ್ಪ ದಗಾಟಿ, ಶಿವಮೊಗ್ಗಿ ತರಕಾರ ಊರಿನ ಸಮಸ್ತ ಗುರು ಹಿರಿಯರು ಯುವಕ ಮಿತ್ರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೀಗಳನ್ನು ಗ್ರಾಮಕ್ಕೆ ವಾದ್ಯ ವೈಭವಗಳೊಂದಿಗೆ ಬರಮಾಡಿಕೊಳ್ಳಲಾಯಿತು.

Related Articles

Back to top button