ರಾಜಕಟ್ಟಿ, ಶಿರೂರ ಗ್ರಾಮದ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳನ್ನು ಮೆಚ್ಚಿ ರಾಜಕಟ್ಟಿ, ಶಿರೂರ ಗ್ರಾಮದ ನೂರಾರು ಬಿಜೆಪಿ ಕಾರ್ಯಕರ್ತರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ್ದು ಸಂತಸ ತಂದಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಗೋಕಾಕ ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಯಮಕನಮರಡಿ ವಿಧಾನಸಭಾ ಕ್ಷೇತ್ರದ ರಾಜಕಟ್ಟಿ ಹಾಗೂ ಶಿರೂರ ಗ್ರಾಮದ ನೂರಾರು ಬಿಜೆಪಿ ಕಾರ್ಯಕರ್ತರಿಗೆ ಶಾಲು ಹೊದಿಸಿ ಸನ್ಮನಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ವಿಧಾನಸಭೆ ಚುನಾವಣೆಯಲ್ಲಿ ಭರವಸೆ ನೀಡಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಜನರ ಸಂಕಷ್ಟಕ್ಕೆ ನೆರವಾಗಿದ್ದೇವೆ. ಅದೇ ರೀತಿ ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ. ಕಾರಣ ಚಿಕ್ಕೋಡಿ ಲೋಕಸಭೆ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಆಯ್ಕೆಮಾಡುವ ಮೂಲಕ ಕೇಂದ್ರದಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಕರೆ ನೀಡಿದರು.
ಇದೇ ವೇಳೆ ಯಮಕನಮರಡಿ ವಿಧಾನಸಭಾ ಕ್ಷೇತ್ರದ ರಾಜಕಟ್ಟಿ ಹಾಗೂ ಶಿರೂರ ಗ್ರಾಮದ ನೂರಾರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಕಾರ್ಯಕರ್ತರನ್ನು ಸಚಿವ ಸತೀಶ್ ಜಾರಕಿಹೊಳಿ ಅವರು ಸತ್ಕರಿಸಿದರು.
ಈ ಸಂದರ್ಭದಲ್ಲಿ ರಾಜಕಟ್ಟಿ, ಶಿರೂರ ಗ್ರಾಮದ ನೂತನ ಕಾರ್ಯಕರ್ತರಾದ ರಾಜಕುಮಾರ್ ಪೂಜೇರಿ, ನಾಗಪ್ಪ ಪೂಜೇರಿ, ಈರಪ್ಪ ಮ್ಯಾಕಲಿ, ದಾನಪ್ಪ ಪೂಜೇರಿ, ಸಿದಪ್ಪ ಪೂಜೇರಿ, ಯಲ್ಲಪ್ಪ ಕಾರಣವರ, ಕಲ್ಲಪ್ಪ ಕುಪಾನಿ, ಯಲ್ಲಪ್ಪ ಹಂಜಿನಮಣಿ, ಭೀಮರಾಯಿ ಧಾಧಿಕಾನ್, ಪ್ರಿಯಾ ಧಾಧಿಕಾನ್, ಕಲ್ಲಪ್ಪ ಬುಸಾರಿ, ನಾಗಪ್ಪ ಧಾಧಿಕಾನ್, ಮಾರುತಿ ಧಾಧಿಕಾನ್, ಬಸವರಾಜ್ ಇರಭಾವಿ, ಮಾರುತಿ ಇರಭಾವಿ, ಕೀರನ ಬುಸಾರಿ, ಪರುಶುರಾಮ್ ಧಾಧಿಕಾನ್, ಕೀರನ ಧಾದಿಕಾನ್, ಬಸುರಾಜ ಸುಟಕ, ಬಸುರಾಜ ಕುಂಬಾರ, ಸಿದ್ರು ಗುದ್ಯಾಗೋಳ ಸೇರಿದಂತೆ ಕಾಂಗ್ರೆಸ್ ಮುಖಂಡರಾದ ಭೀಮರಾಯಿ ಭೀಜನಾಯಿಕ್, ಯಲ್ಲಪ್ಪ ನಾಯಿಕ್, ಮಾರುತಿ ಧಾಧಿಕಾನ್, ಗಿರೀಶ್ ಪಾಟೀಲ್, ಲಕ್ಷ್ಮಣ್ ನಾಯಕ್, ಯಲ್ಲಪ್ಪ ಬುಸಾರಿ, ಬಸು ಪೂಜೇರಿ, ಬಸವಣ್ಣಿ ಬೀಜನಾಯಿಕ್, ಯಲ್ಲಪ್ಪ ಹುಲೀಕಟ್ಟಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ