Kannada NewsNational

*ಲೀವರ್ ಶಸ್ತ್ರಚಿಕಿತ್ಸೆ ಬಳಿಕ ಪತಿ ಪತ್ನಿ ಸಾವು: ಆಸ್ಪತ್ರೆಗೆ ನೋಟಿಸ್ ಜಾರಿ*

ಪ್ರಗತಿವಾಹಿನಿ ಸುದ್ದಿ: ಆಸ್ಪತ್ರೆಯೊಂದು ಮಾಡಿದ ಯಡಟ್ಟಿಗೆ ಪತಿ ಪತ್ನಿ ಜೀವ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಪತಿಯ ಜೀವ ಉಳಿಸಲು ಪತ್ನಿ ತನ್ನ ಲಿವರ್ ನ ಒಂದು ಭಾಗವನ್ನು ದಾನ ಮಾಡಿದ್ದರು. ಆದರೆ ಕಸಿ ಶಸ್ತ್ರಚಿಕಿತ್ಸೆ ಬಳಿಕ ಪತಿ ಮೃತ ಒಟ್ಟರೆ ಕೆಲ ದಿನದ ಬಳಿಕ ಪತ್ನಿಯು ಮೃತಪಟ್ಟಿದ್ದಾಳೆ.

ಏನಿದು ಪ್ರಕರಣ..?

ಮಹಾರಾಷ್ಟ್ರದ ಪುಣೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ  ವ್ಯಕ್ತಿಯ ಲೀವರ್ ಶಸ್ತ್ರಚಿಕಿತ್ಸೆ ನಡೆದಿದೆ. ವ್ಯಕ್ತಿಗೆ ತನ್ನ ಪತ್ನಿಯೆ ಲೀವರ್ ದಾನ ಮಾಡಿದ್ದಾಳೆ. ಆದರೆ ಈ ಇಬ್ಬರು ರೋಗಿಗಳು ಸಾವನ್ನಪ್ಪಿದ್ದು,  ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಆರೋಗ್ಯ ಇಲಾಖೆಯು ಆಸ್ಪತ್ರೆಗೆ ನೋಟಿಸ್ ಜಾರಿಗೊಳಿಸಿದೆ.

ಯಕೃತ್‌ ವೈಫಲ್ಯದಿಂದ ಬಳಲುತ್ತಿದ್ದ ಬಾಪು ಕುಮಾ‌ರ್ ಎಂಬವರಿಗೆ ಅವರ ಪತ್ನಿ ಕಾಮಿನಿ ಎಂಬವರು ಯಕೃತ್ ದಾನ ಮಾಡಿದ್ದರು. ಆ. 15ರಂದು ಬಾಪು ಕುಮಾ‌ರ್ ಅವರಿಗೆ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ನೆರವೇರಿತ್ತು. ಆದರೆ, ಅವರು ಆಗಸ್ಟ್ 17ರಂದು ಮೃತಪಟ್ಟಿದ್ದರು. ಇದರ ಬೆನ್ನಿಗೇ, ಆಗಸ್ಟ್ 21ರ ವೇಳೆಗೆ ಕಾಮಿನಿ ಅವರಿಗೆ ಯಕೃತ್ತಿನಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈ ಸೋಂಕಿಗೆ ಚಿಕಿತ್ಸೆ ಪಡೆಯವಾಗಲೇ ಅವರೂ ಕೂಡಾ ಮೃತಪಟ್ಟಿದ್ದಾರೆ. 

Home add -Advt

ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿಯೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಆರೋಪಿಸಿರುವ ಮೃತರ ಕುಟುಂಬದ ಸದಸ್ಯರು, ತನಿಖೆಗಾಗಿ ಆಗ್ರಹಿಸಿದ್ದಾರೆ.

ಕುಟುಂಬಸ್ಥರ ದೂರಿನ ಅನ್ವಯ, ಆರೋಗ್ಯ ಇಲಾಖೆ ಆಸ್ಪತ್ರೆಗೆ ನೋಟಿಸ್‌ ನೀಡಿದ್ದು, ಕಸಿ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನೂ ಹಂಚಿಕೊಳ್ಳುವಂತೆ ಸೂಚಿಸಿದೆ.

Related Articles

Back to top button