Karnataka NewsLatest

*ದೇವಸ್ಥಾನಕ್ಕೆಂದು ಕರೆದೊಯ್ದು ಪತ್ನಿಯನ್ನು ಹತ್ಯೆಗೈದ ಪತಿ*

ಪ್ರಗತಿವಾಹಿನಿ ಸುದ್ದಿ: ಪತಿ-ಪತ್ನಿ ನಡುವಿನ ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹೂಜಗಲ್ಲು ಬೆಟ್ಟದಲ್ಲಿ ನಡೆದಿದೆ.

ದೇವಸ್ಥಾನಕ್ಕೆಂದು ಪತ್ನಿಯನ್ನು ಕರೆದೊಯ್ದ ಪತಿ ಮಹಾಶಯ, ಆಕೆಯನ್ನು ಬರ್ಬರವಾಗಿ ಹತ್ಯೆಗೈದು ಬೆಟ್ಟದಲ್ಲಿ ಬಿಸಾಕಿರುವ ಘಟನೆ ಬೆಳಕಿಗೆ ಬಂದಿದೆ. ದಿವ್ಯಾ (32) ಕೊಲೆಯಾದ ಮಹಿಳೆ. ಉಮೇಶ್ ಪತ್ನಿಯನ್ನೇ ಕೊಂದ ಪತಿ.

ದಿವ್ಯಾ ಹಾಗೂ ಉಮೇಶ್ ನಡುವೆ ಕೌಟುಂಬಿಕ ಕಲಹದಿಂದಾಗಿ ಇಬ್ಬರೂ ವಿಚ್ಛೇದನಕ್ಕೆ ನಿರ್ಧರಿಸಿದ್ದರು. ಇದೇ ವಿಚಾರವಾಗಿ ಮಾಗಡಿ ಕೋರ್ಟ್ ಗೆ ದಂಪತಿ ಹಾಜರಾಗಿದ್ದರು. ಕೋರ್ಟ್ ನಿಂದ ವಾಪಾಸ್ ಆಗುವಾಗ ಉಮೇಶ್, ಪತ್ನಿ ದಿವ್ಯಾಳನ್ನು ದೇವಸ್ಥಾನಕ್ಕೆ ಹೋಗಿ ಬರೋಣವೆಂದು ಕೇಳಿದ್ದಾನೆ. ಇದಕ್ಕೆ ಒಪ್ಪಿ ದಿವ್ಯಾ, ಪತಿಯೊಂದಿಗೆ ದೇವಸ್ಥಾನಕ್ಕೆಂದು ತೆರಳಿದ್ದಾಳೆ.

ಪತ್ನಿಯನ್ನು ಹೂಜಗಲ್ಲು ಬೆಟ್ಟಕ್ಕೆ ಕರೆದೊಯ್ದು ಪೂಜೆ ವೇಳೆ ಆಕೆಯನ್ನು ಹತ್ಯೆಗೈದಿದ್ದಾನೆ. ಬಳಿಕ ಶವವನ್ನು ಚಲ್ಲೂರು ಅರಣ್ಯ ಪ್ರದೇಶಕ್ಕೆ ಬಿಸಾಕಿ ಪರಾರಿಯಾಗಿದ್ದಾನೆ.

Home add -Advt

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪತಿ ಉಮೇಶ್ ಹಾಗೂ ಮತ್ತೋರ್ವ ಆರೋಪಿಗಾಗಿ ಶೋಧ ನಡೆಸಿದ್ದಾರೆ.


Related Articles

Back to top button