Latest

*ಸ್ಯಾಂಟ್ರೋ ರವಿ ವಿರುದ್ಧ EDಗೆ ದೂರು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಸ್ಯಾಂಟ್ರೋ ರವಿ ವಿರುದ್ಧ ಜಾರಿ ನಿರ್ದೇಶನಾಲಯ (ED)ಕ್ಕೆ ದೂರು ನೀಡಲಾಗಿದೆ.

ಸ್ಯಾಂಟ್ರೋ ರವಿ ವಿರುದ್ಧ ಮೈಸೂರಿನ ಒಡನಾಡಿ ಸಂಸ್ಥೆ ಇಡಿಗೆ ದೂರು ನೀಡಿದೆ. ಈ ಬಗ್ಗೆ ಒಡನಾಡಿ ಸಂಸ್ಥೆಯ ಸದಸ್ಯ ಪರಶುರಾಮ್ ಮಾಹಿತಿ ನೀಡಿದ್ದು, ಅಕ್ರಮವಾಗಿ ಹಣ, ಸೈಟ್ ಸಂಪಾದನೆ ಹಿನ್ನೆಲೆಯಲ್ಲಿ ಸ್ಯಾಂಟ್ರೋ ರವಿ ವಿರುದ್ಧ ದೂರು ದಾಖಲಿಸಿದ್ದೇವೆ ಎಂದು ತಿಲಿಸಿದ್ದಾರೆ.

Home add -Advt

ಎರಡು ಕಂಪನಿಗಳ ಮೂಲಕ ಹವಾಲಾ ಹಣ ವರ್ಗಾವಣೆಯಾಗಿದೆ. ತನ್ನ ಆರ್ಥಿಕ ಅಪರಾಧಗಳಿಗಾಗಿ ಕುಮಾರಕೃಪಾ ದುರ್ಬಳಕೆ ಮಾಡಿದ್ದಾನೆ ಈ ಎಲ್ಲಾ ಕಾರಣಗಳಿಂದಾಗಿ ಇಡಿಗೆ ದೂರು ನೀಡಿದ್ದೇವೆ. ಇಡಿ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮತ್ತಷ್ಟು ದಾಖಲೆಗಳನ್ನು ನೀಡುವಂತೆ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

*BREAKING NEWS: ಕೋಲಾರದಿಂದ ಸ್ಪರ್ಧೆಗೆ ತೀರ್ಮಾನ: ಸಿದ್ದರಾಮಯ್ಯ ಅಧಿಕೃತ ಘೋಷಣೆ*

https://pragati.taskdun.com/vidhanasabha-election-2023siddaramiahkolaracontestannounce/

Related Articles

Back to top button