Latest

ಶುಲ್ಕ ಪಾವತಿಸದೇ ಶಾಲೆಗೆ ಬರಬೇಡ ಎಂದ ಆಡಳಿತ ಮಂಡಳಿ; ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಶಾಲಾ ಶುಲ್ಕ ಪಾವತಿಸದೇ ಇದ್ದ ವಿದಾರ್ಥಿನಿಗೆ ಶಾಲೆಗೆ ಬರದಂತೆ ಆಡಳಿತ ಮಂಡಳಿ ಗದರಿದ್ದಕ್ಕೆ ಮನ ನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ ನ ನೆರೆಡ್ ಮೆಟ್ ನಲ್ಲಿ ನಡೆದಿದೆ.

ಯಶಸ್ವಿನಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಖಾಸಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ತಂದೆ-ತಾಯಿ ಕೂಲಿ ಕಾರ್ಮಿಕರಾಗಿದ್ದಾರೆ.

ಯಶಸ್ವಿನಿಗೆ ಶಾಲೆ ಆಡಳಿತ ಮಂಡಳಿ ಶುಲ್ಕ ಪಾವತಿಸುವಂತೆ ಸೂಚಿಸಿತ್ತು. ಆದರೆ ಹಣವಿಲ್ಲದೇ ವಿದ್ಯಾರ್ಥಿನಿಗೆ ಶುಲ್ಕ ಪಾವತಿಸಲು ಸಾಧ್ಯವಾಗಿಲ್ಲ. ಆ ಬಳಿಕ ಯಶಸ್ವಿನಿ ಶಾಲೆಗೆ ಹಾಜರಾಗಲು ಆಡಳಿತ ಮಂಡಳಿ ಅವಕಾಶವನ್ನು ನೀಡಿರಲಿಲ್ಲ ಇದೇ ಕಾರಣಕ್ಕೆ ನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಅಧಿಕಾರಿ ನರಸಿಂಹ ಸ್ವಾಮಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button