
ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಜೋರಾಗಿದೆ. ಇದರ ಜತೆ ದಲಿತ ಸಿಎಂ ವಿಚಾರವೂ ದೊಡ್ಡದಾಗಿ ಸದ್ದು ಮಾಡುತ್ತಿದೆ. ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತಾಡಿದ ಅವರು, ದಲಿತ ಸಿಎಂ ಮಾಡಿದರೆ ಬಹಳ ಸಂತೋಷ. ಆದರೆ ಇದನ್ನು ಹಾದಿ ಬೀದಿಯಲ್ಲಿ ಮಾತನಾಡಿರುವುದು ಸರಿಯಲ್ಲ ಕಾಂಗ್ರೆಸ್ ನಲ್ಲಿ ಬಹಳ ಗೊಂದಲ ಇದೆ ಇದೊಂದು ರಾಜ್ಯ ಹೋಗುತೆಂದು ಮ್ಯಾನೇಜ್ ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ರಾಹುಲ್ ಗಾಂಧಿ ಸೀರಿಯಸ್ ರಾಜಕಾರಣಿ ಅಲ್ಲ. ಪ್ರತಿಭಟನೆ ಮಾಡೋದು ನಂತರ ವಿದೇಶಕ್ಕೆ ಹೋಗೋದು. ರಾಹುಲ್ ಬರೀ ಅದಾನಿ, ಅಂಬಾನಿ ಬಗ್ಗೆ ಮಾತನಾಡುವುದೇ ಆಗಿದೆ ಇನ್ನು ಎಷ್ಟು ವರ್ಷ ಅವರ ಬಗ್ಗೆ ಮಾತಾಡುತ್ತೀರಿ? ಎಂದು ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.
ಸಿದ್ದರಾಮಯ್ಯ ಬೇಕೊ ಬೇಡವೋ ಎಂದು ಅವರ ಪಕ್ಷ ತೀರ್ಮಾನಿಸಲಿ. ಆದರೆ ಸರಿಯಾದ ರೀತಿ ಆಡಳಿತ ಕೊಡಲಿ. ಈಗ ಯಾಕೆ ಸಿದ್ದರಾಮಯ್ಯ ನಿವೃತ್ತಿಯ ಬಗ್ಗೆ ಚರ್ಚೆ? ಸಿದ್ದರಾಮಯ್ಯ ನಿವೃತ್ತಿ ಆಗುತ್ತಾರೋ ಅಥವಾ ಇರುತ್ತಾರೋ ಡಿಕೆ ಸಿಎಂ ಆಗುತ್ತಾರೋ? ಇದೆಲ್ಲ ಇವಾಗ ಯಾಕೆ ಚರ್ಚೆ? ದಲಿತ ಸಿಎಂ ಕೂಗು ಎದ್ದಿದೆ ಆಡಳಿತದಲ್ಲಿ ಗೊಂದಲ ಇದೆ ಮೊದಲು ಗೊಂದಲ ಸರಿಪಡಿಸಿ ಎಂದು ಜೋಶಿ ಸಲಹೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ