
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೋವಿಡ್ ಟೆಸ್ಟ್ ಗಾಗಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳಿಗಾಗಿ ಜನರು ಅಲೆದಾಡಬೇಕಿಲ್ಲ. ಇನ್ಮುಂದೆ ಮನೆಯಲ್ಲಿಯೇ ಸ್ವತ: ನಾವೇ ಕೋವಿಡ್ ಟೆಸ್ಟ್ ಮಾಡಿಕೊಳ್ಳಬಹುದಾಗಿದೆ. ಇಂತಹ ನೂತನ ವ್ಯವಸ್ಥೆಯ ಟೆಸ್ಟ್ ಕಿಟ್ ಗೆ ಐಸಿಎಂಆರ್ ಅನುಮತಿ ನೀಡಿದೆ.
ಮನೆಯಲ್ಲಿಯೇ ಕೋವಿಡ್ ಟೆಸ್ಟ್ ಗಳನ್ನು ಸ್ವತಂತ್ರವಾಗಿ ಮಾಡಿಕೊಳ್ಳಬಹುದಾದ ಕೋವಿಸೆಲ್ಫ್ ಎಂಬ ಕಿಟ್ ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಅನುಮತಿ ನೀಡಿದೆ.
ಈ ಕಿಟ್ ನಲ್ಲಿ ಮೂಗಿನ ದ್ರವ ಸಂಗ್ರಹಿಸುವ ಉಪಕರಣ, ಎಕ್ಸ್ ಟ್ರ್ಯಾಕ್ಷನ್ ಟ್ಯೂಬ್, ಒಂದು ಟೆಸ್ಟ್ ಕಾರ್ಡ್ ಇರುವ ಪೌಚ್ ಇರಲಿದೆ. ಕೋವಿಸೆಲ್ಫ್ ಮೂಲಕ ಪರೀಕ್ಷೆ ನಡೆಸಲು ಬಳಕೆದಾರರು ಮೈಲ್ಯಾಬ್ ಅಪ್ಲಿಕೇಷನ್ ನ್ನು ತಮ್ಮ ಮೊಬೈಲ್ ನಲ್ಲಿ ಹೊಂದಿರಬೇಕು. ಪರೀಕ್ಷೆ ನಡೆಸಿಕೊಳ್ಳುವ ವಿಧಾನದ ಹಂತವನ್ನು ಐಸಿಎಂ ಆರ್ ವಿಡಿಯೋ ಮೂಲಕ ವಿವರಿಸಿದೆ.
ಲಾಕ್ ಡೌನ್ ಇನ್ನಷ್ಟು ಕಠಿಣ