ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಶಾಲೆಗಳಲ್ಲಿ ಮಕ್ಕಳು ಮೊಟ್ಟೆ ಕೇಳಿದರೆ ಕಡ್ಡಾಯವಾಗಿ ನೀಡಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತ ಆರ್.ವಿಶಾಲ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿ ಮಕ್ಕಳಲ್ಲಿನ ಅಪೌಷ್ಟಿಕತೆ ಮತ್ತು ರಕ್ತಹೀನತೆ ಹೋಗಲಾಡಿಸಲು ವಾರದಲ್ಲಿ ಎರಡು ದಿನ ಪೌಷ್ಟಿಕ ಆಹಾರ ನೀಡಲು ಕ್ರಮ ಕೈಗೊಂಡಿದೆ.
ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಮೊಟ್ಟೆ, ಶೇಂಗಾಚಿಕ್ಕಿ, ಬಾಳೆ ಹಣ್ಣು ವಿತರಿಸಲಾಗುತ್ತಿದೆ. ಕೆಲ ಶಾಲೆಗಳಲ್ಲಿ ಮಕ್ಕಳು ಮೊಟ್ಟೆಗೆ ಬೇಡಿಕೆ ಇಟ್ಟರೂ ಕೊಡದೆ ಚಿಕ್ಕಿ, ಬಾಳೆಹಣ್ಣು ನೀಡುತ್ತಿರುವ ದೂರುಗಳು ಕೇಳಿಬಂದಿದೆ. ಈ ರೀತಿ ಮಕ್ಕಳ ಮನಸ್ಸಿಗೆ ವಿರುದ್ಧವಾಗಿ ತಿನಿಸು ನೀಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಎಲ್ಲ ಜಿಲ್ಲಾ ಪಂಚಾಯಿತಿ ಸಿಇಒಗಳು ಪರಿಶೀಲನೆ ಕೈಗೊಳ್ಳಬೇಕು ಎಂದು ವಿಶಾಲ್ ಸೂಚಿಸಿದ್ದಾರೆ.
ಬೇಯಿಸಿದ ಮೊಟ್ಟೆಗಳನ್ನಷ್ಟೇ ಮಕ್ಕಳಿಗೆ ನೀಡಬೇಕು. ಪ್ರಸ್ತುತ ಒಂದು ಮೊಟ್ಟೆಗೆ 6 ರೂ. ನೀಡಲಾಗುತ್ತಿದ್ದು, ದರ ಹೆಚ್ಚಳವಾದರೆ ಹಿಂದಿನ ಉಳಿಕೆ ಹಣ ಅಥವಾ ಎಸ್‌ಡಿಎಎಂಸಿ ಸಮಿತಿಯ ಹಣದಲ್ಲೇ ಭರಿಸಿಕೊಳ್ಳಬೇಕು ಎಂದು ಸಹ ಅವರು ತಿಳಿಸಿದ್ದಾರೆ.
ಬದಲಾಗಿದೆ SSLC ಪರೀಕ್ಷಾ ಮಂಡಳಿ ವೆಬ್ ಸೈಟ್ ವಿಳಾಸ
https://pragati.taskdun.com/sslc-exam-board-website-address-changed/
ಬೆಳಗಾವಿ ಮೇಯರ್, ಉಪಮೇಯರ್ ಚುನಾವಣೆ ದಿನಾಂಕ ಪ್ರಕಟ
https://pragati.taskdun.com/belagavi-mayor-deputy-mayor-election-date-announced/
ಸಾಧಕರಿಗೆ ಚೈತನ್ಯದಾಯಕ ಸಮಯ; ಮಕರ ಸಂಕ್ರಾಂತಿ
https://pragati.taskdun.com/makara-sankranti-an-invigorating-time-for-pros/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ