ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್.ಈಶ್ವರಪ್ಪ ವಜಾ ಮಾಡಿದರೆ ಸಮಾಧಾನವಿಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.
ಪ್ರಕರಣ ಗಂಭೀರವಾಗಿದ್ದು, ತಕ್ಷಣ ಈಶ್ವರಪ್ಪ ಬಂಧಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎದು ಹೆಬ್ಬಾಳಕರ್ ಆಗ್ರಹಿಸಿದ್ದಾರೆ.
ಸಂತೋಷ ನೇರವಾಗಿ ಆರೋಪವನ್ನು ಮಾಡಿದ್ದಾರೆ. ತಿಂಗಳ ಹಿಂದೆಯೇ ಅವರು ಹೇಳಿದ್ದರು. ಈಶ್ವರಪ್ಪ ವಿರುದ್ಧ 2 ಪ್ರಕರಣ ದಾಖಲಿಸಬೇಕು. ಆತ್ಮಹತ್ಯೆ ಸಂಬಂಧ ಒಂದು ಮತ್ತು ಭ್ರಷ್ಟಾಚಾರ ಸಂಬಂಧ ಇನ್ನೊಂದು ಪ್ರಕರಣ ದಾಖಲಿಸಬೇಕು ಎಂದೂ ಲಕ್ಷ್ಮಿ ಹೆಬ್ಬಾಳಕರ್ ಆಗ್ರಹಿಸಿದರು.
ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಬಂಧಿಸಿದರೆ ಈ ಪ್ರಕರಣದ ಆಳ ಗೊತ್ತಾಗಲಿದೆ. ಆಗ ಯಾರು ಅಧಿಕಾರದಲ್ಲಿದ್ದರು. ಟೆಂಡರ್ ಇಲ್ಲದೆ ಕೆಲಸ ಮಾಡುವಂತೆ ಯಾರು ಹೇಳಿದ್ದರು ಎಲ್ಲವೂ ಬಹಿರಂಗವಾಗಲಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ