Latest

15ಲಕ್ಷ ನೀಡುವುದಾಗಿ ಮೋದಿ ಹೇಳಿದ್ದರೆ ಸಾಕ್ಷ್ಯ ಕೊಡಿ: ಕೇಂದ್ರ ಸಚಿವ ಎ. ನಾರಾಯಣಸ್ವಾಮಿ

ಪ್ರಗತಿವಾಹಿನಿ ಸುದ್ದಿ, ಚಿತ್ರದುರ್ಗ : ಪ್ರಧಾನಿ ನರೇಂದ್ರ ಮೋದಿಯವರು ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಯಲ್ಲಿ 15 ಲಕ್ಷ ಹಾಕುವುದಾಗಿ ಹೇಳಿದ ಬಗ್ಗೆ ಸಾಕ್ಷ್ಯವಿದ್ದರೆ ನೀಡಲಿ, ನಾನೇ ಕ್ಷಮೆ ಕೇಳುತ್ತೇನೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ ಸವಾಲೆಸೆದಿದ್ದಾರೆ.

ನಗರದಲ್ಲಿ ಸುದ್ದಿಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಗ್ಯಾರಂಟಿಗಳ ಬಗ್ಗೆ ನೀಡಿದ ಎಲ್ಲ ಹೇಳಿಕೆಗಳ ಆಧಾರ ನನ್ನ ಬಳಿ ಇದೆ. ಆದರೆ ನರೇಂದ್ರ ಮೋದಿಯವರು 15 ಲಕ್ಷ ಪ್ರತಿಯೊಬ್ಬರ ಖಾತೆಗೆ ಹಾಕುವುದಾಗಿ ಹೇಳಿರುವ ಒಂದೇ ಒಂದು ಸಾಕ್ಷ್ಯಾಧಾರ ಇದ್ದರೆ ನೀಡಲಿ ಎಂದರು.

ರಾಜ್ಯದ ಕಾಂಗ್ರೆಸ್ ಸರಕಾರದಿಂದ ಜನರನ್ನು ಭಿಕ್ಷಾಟನೆಯ ಕೂಪಕ್ಕೆ ತಳ್ಳುವ ಕೆಲಸ ನಡೆದಿದೆ. ಜನರನ್ನು ಭಿಕ್ಷುಕರ ಸಾಲಿನಲ್ಲಿ ನಿಲ್ಲಿಸಿ ಅಧಿಕಾರ ಗಿಟ್ಟಿಸುವ ಹುನ್ನಾರ ಕಾಂಗ್ರೆಸ್ಸಿನದಾಗಿತ್ತು ಎಂದು ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳ ವಿರುದ್ಧ ಕಿಡಿ ಕಾರಿದ್ದಾರೆ.

ಕಾಂಗ್ರೆಸ್ ಸಿದ್ಧಾಂತದ ಮೂಲಕ ಗೆಲುವು ಸಾಧಿಸಿದೆ ಎಂದು ಹೇಳಿಕೊಳ್ಳುವ ನೈತಿಕತೆ ಕಳೆದುಕೊಂಡಿದೆ. ಸ್ವಾತಂತ್ರ್ಯ ಸೇನಾನಿಗಳ ಕನಸುಗಳನ್ನು ನುಚ್ಚುನೂರು ಮಾಡಿ ಸಿದ್ಧಾಂತ ಗಾಳಿಗೆ ತೂರಿ ಜನತೆಗೆ ಆಮಿಷವೊಡ್ಡುವ ಮೂಲಕ ಅಧಿಕಾರ ಗಿಟ್ಟಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಸಿ ಬಳಿದಿದೆ ಎಂದು ಟೀಕಿಸಿದರು.

https://pragati.taskdun.com/belgaum-constable-and-three-arrested-for-deceiving-to-exchange-notes-of-2000-rs/

https://pragati.taskdun.com/gangster-chhota-rajan-moved-court-against-scoop-web-series/

https://pragati.taskdun.com/man-stands-naked-on-table-at-vatican-church-to-protest-ukraine-war/

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button