ಪ್ರಗತಿವಾಹಿನಿ ಸುದ್ದಿ, ಶಿರಸಿ: ಪ್ರತಿ ಒಬ್ಬ ಮನುಷ್ಯನೂ ತಮ್ಮೊಳಗಿನ ಅಹಂಭಾವ ಹಾಗೂ ಹೊರಗಿನ ಆಡಂಬರ ಕಳೆದುಕೊಳ್ಳಬೇಕು. ಇದರಿಂದ ಸದಾ ನೆಮ್ಮದಿ ಕಂಡುಕೊಳ್ಳಬಹುದು ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾ ಸ್ವಾಮೀಜಿಗಳು ನುಡಿದರು.
ಅವರು ನಗರದ ಹೊರ ವಲಯದ ವೇದ ಆರೋಗ್ಯ ಕೇಂದ್ರದ ನಿಸರ್ಗಮನೆಯಲ್ಲಿ ಪ್ರಸಿದ್ಧ ವೈದ್ಯ, ಅಂಕಣಕಾರ ಡಾ. ವೆಂಕಟರಮಣ ಹೆಗಡೆ ದಂಪತಿಗಳನ್ನು ಸನ್ಮಾನಿಸಿ ಮಾತನಾಡಿದರು.
ಪ್ರಕೃತಿಯ ನಡುವೆ ಇದ್ದರೆ ಎಲ್ಲವೂ ಕಳೆದು ಹೋಗುತ್ತದೆ. ಒಳಗಿನ ಹಾಗೂ ಹೊರಗಿನ ಒತ್ತಡ ಕಳೆಯುವ ಕೆಲಸ ನಿಸರ್ಗ ಮನೆಯಲ್ಲಿ ಆಗುತ್ತಿದೆ. ಡಾ.ವೆಂಕಟರಮಣ ಹೆಗಡೆ ಅವರು ಸಮಾಜಕ್ಕೆ ನೀಡುತ್ತಿರುವ ಜನರ ಆರೋಗ್ಯ ವರ್ಧನಾ ಸೇವೆ ದೊಡ್ಡದು ಎಂದರು.
ಕಲೆ ಸಾಹಿತ್ಯ ಸಂಸ್ಕೃತಿಗಳ ಉಳಿವು ಆಗಬೇಕು. ಅಂಥ ಉಳಿಸುವ ಕೆಲಸ, ಉತ್ತೇಜಿಸುವ ಕೆಲಸ ಆರೋಗ್ಯ ಜಾಗೃತಿಯ ಜೊತೆ ಇಲ್ಲಿ ನಡೆದಿದೆ ಎಂದೂ ಬಣ್ಣಿಸಿ, ಕನ್ನಡದ ನೆಲದಲ್ಲಿ ಕನ್ನಡ ಉಳಿಸಿ ಬೆಳಸುವ ಕಾರ್ಯ ಆಗಬೇಕು ಎಂದರು.
ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡುತ್ತಾ ಮಲೆನಾಡಿನ ಮಡಿಲಲ್ಲಿ ಇಂಥದ್ದೊಂದು ನಿಸರ್ಗ ಚಿಕಿತ್ಸಾ ಕೇಂದ್ರವನ್ನು ಆರಂಭಿಸಿದ ಡಾ. ವೆಂಕಟರಮಣ ಹೆಗಡೆ ಅವರ ಹಾಗೂ ಅವರ ಬಳಗದ ಶ್ರಮ ದೊಡ್ಡದು. ಆರೋಗ್ಯ ಇನ್ನಷ್ಟು ಸಂಪಾದಿಸಲು ಇದು ಬಹಳ ಅನುಕೂಲ ,
ನಾನು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಣ ಸಚಿವನಿದ್ದಾಗ ಹುಕ್ಕೇರಿಗೆ ಎರಡು ಭಾರಿ ನೀಡಿ ನೀಡಿದ್ದೆನೆ ಒಂದು ದಸರಾ ಉತ್ಸವ ಕಾರ್ಯಕ್ರಮದಲ್ಲಿ ಇನ್ನೊಂದು ಶ್ರೀಗಳು ನಡೆಸುತ್ತಿರುವ ಅಕ್ಷರ ದಾಸೋಹ ಯೋಜನೆಯ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಶ್ರೀಗಳು ಗಡಿ ಭಾಗದಲ್ಲಿ ಕನ್ನಡಪರ ಕಾರ್ಯಗಳನ್ನು ಮಾಡುವುದರ ಜೊತೆಗೆ ಇವತ್ತು ಕರ್ನಾಟಕ ರಾಜ್ಯ ಬಿಸಿಯೂಟ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾಗಿ 51 NGO ಗಳಿಗೆ ಮಾರ್ಗದರ್ಶನ ಮಾಡುತ್ತಿರುವುದು ನಮಗೆ ಅತಿವ ಸಂತೋಷ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ನಿಸರ್ಗ ಮನೆ ಮುಖ್ಯಸ್ಥ ಡಾಕ್ಟರ್ ವೆಂಕಟರಮಣನ ಹೆಗಡೆಯವರು ಮಾತನಾಡಿ ಇವತ್ತು ನಮ್ಮ ನಿಸರ್ಗಮನೆಗೆ ಎರಡು ರತ್ನಗಳು ಆಗಮಿಸಿವೆ, ಒಂದು ಆಧ್ಯಾತ್ಮದ ರತ್ನ ಇನ್ನೊಂದು ರಾಜಕೀಯವಾಗಿ ಉನ್ನತ ಹೆಸರು ಮಾಡಿದ ರತ್ನ ಅವರೆ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಎಂದು ಹೃದಯ ತುಂಬಿ ಮಾತನಾಡಿದರು.
ಇದಕ್ಕೂ ಮುನ್ನ ತುಳಸಿ ಹೆಗಡೆ ಅವಳಿಂದ ವಿಶ್ವಶಾಂತಿ ಸರಣಿ ಗಂಗಾವತರಣ ಯಕ್ಷನೃತ್ಯ ರೂಪಕ ಪ್ರದರ್ಶನ ಕಂಡಿತು. ಕಲಾವಿದ ವೆಂಕಟೇಶ ಬೊಗ್ರಿಮಕ್ಕಿ ಪ್ರಸಾದನ ನಡೆಸಿಕೊಟ್ಟರು. ಈ ವೇಳೆ ಸಂಗೀತಾ ವಿ.ಹೆಗಡೆ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ