ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:
ಹೃದಯ ಸ್ತಂಭನ, ವಿಷ ಪ್ರಾಶನ ಸುಟ್ಟಗಾಯ ಸೇರಿದಂತೆ ಯಾವುದೇ ತುರ್ತು ಸಂದರ್ಭಗಳಲ್ಲಿ ಪ್ರಾಣಾಪಾಯದಿಂದ ಪಾರು ಮಾಡಿ ಅವರ ಜೀವವನ್ನು ಉಳಿಸುವ ಬೇಸಿಕ್ ಲೈಫ್ ಸಪೆÇೀರ್ಟ್ ತರಬೇತಿ ಕಾರ್ಯಾಗಾರವನ್ನು ಭಾರತೀಯ ವೈದ್ಯಕೀಯ ಸಂಘದ ಬೆಳಗಾವಿ ಘಟಕವು ಹಮ್ಮಿಕೊಂಡಿತ್ತು.
ವೈದ್ಯಕೀಯ ತುರ್ತುಪರಿಸ್ಥಿಯಲ್ಲಿ ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕು. ಜೀವಕ್ಕೆ ಹಾನಿಯಾಗದ ರೀತಿಯಲ್ಲಿ ಅವರನ್ನು ಪ್ರಾಣಾಪಾಯದಿಂದ ಪಾರುಮಾಡುವ ಹಾಗೂ ಅದನ್ನು ಹೇಗೆ ನಿಭಾಯಿಸಬೇಕೆನ್ನುವ ತರಬೇತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಡಲಾಯಿತು.
ಬೆಳಗಾವಿಯ ಯಳ್ಳೂರು ರಸ್ತೆಯಲ್ಲಿರುವ ಕೆಎಲ್‍ಇ ಸೆಂಟಿನರಿ ಚಾರಿಟೇಬಲ್ ಆಸ್ಪತ್ರೆಯ ವೈದ್ಯರ ತಂಡವು ಪ್ರಾತ್ಯಕ್ಷಿಕೆ ನಡೆಸಿಕೊಟ್ಟಿತು.
ಹೃದಂiÀi. ಸ್ತಂಭನ, ಉಸಿರಾಟದ ತೊಂದರೆ ಸೇರಿದಂತೆ ಜೀವಕ್ಕೆ ಹಾನಿಯುಂಟಾಗುವ ಸಂದರ್ಭದಲ್ಲಿ ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕೆನ್ನುವ ಅಗತ್ಯವಿರುವ ಜ್ಞಾನ, ತಂತ್ರದ ಸೂಕ್ಷ್ಮ ಅಂಶಗಳು ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಸುಮಾರು 70ಕ್ಕೂ ಅಧಿಕ ಪೆÇಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಅವರೆಲ್ಲರೂ ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳುವವರಾಗಿದ್ದಾರೆ.
ಕೆಎಲ್‍ಇ ಸೆಂಟಿನರಿ ಚಾರಿಟೇಬಲ್ ಆಸ್ಪತ್ರೆಯ ಡಾ.ಸಂತೋಷ್ ಕರ್ಮಸಿ, ಡಾ. ಬಸವರಾಜ್ ಕುಡಸೋಮಣ್ಣನವರ್ ಅವರು ಬೇಸಿಕ್ ಲೈಫ್ ಸಪೆÇೀರ್ಟ್ ಕುರಿತು, ಡಾ ನೇಹಾ ಕುಲಕರ್ಣಿ ಅವರು ಹೃದಯ ಸ್ತಂಬನವಾದಾಗ ಅನುಸರಿಸುವ ತಂತ್ರ, ಡಾ. ಉಜ್ವಲಾ ಹಲಗೇಕರ ಅವರು,
ವಿಷ ಪ್ರಾಶನ ಹಾಗೂ ಹಾವು ಕಡಿತದ ಸಂದರ್ಭದಲ್ಲಿ ಎಚ್ಚರಿಕೆ ಕ್ರಮ, ಡಾ. ದರ್ಶನ ರಜಪೂತ ಅವರು ಸುಟ್ಟ ಗಾಯಾಳುಗಳ ನಿರ್ವಹಣೆ ಹಾಗೂ ಡಾ. ಹೇಮಂತ ಕೌಜಲಗಿ ಅವರು ರಸ್ತೆ ಅಪಘಾತದಲ್ಲಿನ ಗಾಯಾಳುಗಳ ನಿರ್ವಹಣೆ, ಪ್ರಥಮ ಚಿಕಿತ್ಸೆ ಹಾಗೂ ಆಸ್ಪತ್ರೆಗೆ ಸಾಗಿಸುವ ಕುರಿತು ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಡಿಸಿಪಿ ರವೀಂದ್ರ ಗಡಾದಿ(ಕಾನೂನು ಮತ್ತು ಸುವ್ಯವಸ್ಥೆ) ಅವರು ಮಾತನಾಡಿ, ಕೆಎಲ್‍ಇ ಆಸ್ಪತ್ರೆಯ ವೈದ್ಯರ ತಂಡ ಮತ್ತು ಐಎಂಎ ಸದಾ ಪೆÇಲೀಸರ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ. ಪೊಲೀಸರ ಆರೋಗ್ಯ ಕಾಪಾಡಲು ಹಾಗೂ ಅಗತ್ಯ ಚಿಕಿತ್ಸೆ ನೀಡಲು ಸದಾ ಸನ್ನದ್ದವಾಗಿರುತ್ತಾರೆ. ಈ ತರಬೇತಿಯು ತುರ್ತು ಸಂದರ್ಭವನ್ನು ನಿರ್ವಹಿಸಲು ಪೆÇಲೀಸರಿಗೆ ನೆರವಾಗಲಿದೆ ಎಂದು ಹೇಳಿದರು.
ಐಎಂಎ ಖಜಾಂಚಿ ಡಾ. ಬಸವರಾಜ ಬಿಜ್ಜರಗಿ, ಡಾ.ನಮ್ರತಾ ಕುಟ್ರೆ, ಡಾ.ಸತೀಶ ಬಾಗೇವಾಡಿ, ಡಾ.ಸ್ಮಿತಾ ಕೌಜಲಗಿ, ಡಾ.ಮಿಲಿಂದ ಹಲಗೇಕರ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಇಡಬೇಕಾದ ತುರ್ತು ಸಾಮಗ್ರಿಗಳ ಪಟ್ಟಿಯನ್ನು ಹಸ್ತಾಂತರಿಸಿದರು. ಎಸಿಪಿ ಎನ್.ವಿ.ಬರಮನಿ ಮೊದಲಾದವರು ಭಾಗವಹಿಸಿದ್ದರು.
ಡಾ. ರಾಜಶ್ರೀ ಆನಿಗೋಳ ಅತಿಥಿಗಳನ್ನು ಪರಿಚಯಿಸಿದರೆ, ಐಎಂಎ ಅಧ್ಯಕ್ಷೆ ಡಾ. ಸ್ವಪ್ನಾ ಮಹಾಜನ್ ಮತ್ತು ಕಾರ್ಯದರ್ಶಿ ಡಾ. ಹೇಮಂತ್ ಕೌಜಲಗಿ ಇದ್ದರು. ನಗರ ಸಿಸಿಬಿಯ ಪೆÇಲೀಸ್ ನಿರೀಕ್ಷಕ ನಿಂಗನಗೌಡ ಪಾಟೀಲ ಕಾರ್ಯಕ್ರಮವನ್ನು ಸಂಯೋಜಿಸಿದರು.
For English News – https://pragativahini.in/emergency-training-for-police-by-ima-belagavi
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ