Kannada NewsKarnataka News

ಪ್ರಶಿಕ್ಷಣ ವರ್ಗ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಭಾರತೀಯ ಜನತಾ ಪಾರ್ಟಿ ಶಿಕ್ಷಣ ಪ್ರಕೋಷ್ಟ ಕರ್ನಾಟಕ ಬೆಳಗಾವಿ ಉತ್ತರ ಮಂಡಲ ಪ್ರಶಿಕ್ಷಣ ವರ್ಗ ಉದ್ಘಾಟನೆ  ಸಮಾರಂಭ ಶನಿವಾರ ನಡೆಯಿತು.

ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್  ಅವರು ದೀಪ ಬೆಳಗಿಸಿ  ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ ಭಾರತೀಯ ಜನತಾ ಪಾರ್ಟಿ ಶಿಸ್ತು, ಸಂಸ್ಕೃತಿ ಬಗ್ಗೆ ಮತ್ತು ಪಕ್ಷ ಕಟ್ಟಿದವರ ಹಾಗೂ ಆ  ದಿನಗಳಲ್ಲಿ  ಸಂಘಟನೆ ಯಾವ ರೀತಿ  ಸಂಘಟಿತ ಹೋರಾಟದಿಂದ  ಪಕ್ಷವನ್ನು ಬೆಳೆಸಿ ಅಧಿಕಾರ ತರುವಲ್ಲಿ ಹಿರಿಯರ ಶ್ರಮದ ಬಗ್ಗೆ  ಸ್ಮರಿಸಿದರು.

ಕಾರ್ಯಕ್ರಮಕ್ಕೆ ಶಾಸಕ ಅನಿಲ್ ಬೇನಕೆ  ಗೂಳಪ್ಪ ಹೊಸಮನಿ, ಬೆಳಗಾವಿ ನಗರಾಭಿವೃದ್ಧಿ ಅಧ್ಯಕ್ಷರು, ಉಜ್ವಲಾ ಬಡವನಾಚೆ, ರಾಜ್ಯ ಬಿಜೆಪಿ  ಕಾರ್ಯದರ್ಶಿಗಳು, ದಾದಾ ಗೌಡ  ಬಿರಾದರ್, ಬೆಳಗಾವಿ ಬಿಜೆಪಿ ಮಹಾನಗರ  ಜಿಲ್ಲಾ ಪ್ರಧಾನ ಕಾರ್ಯದರ್ಶಿ , ಮುರುಗೇಂದ್ರ ಪಾಟೀಲ್  ಬೆಳಗಾವಿ ಬಿಜೆಪಿ ಮಹಾನಗರ ಜಿಲ್ಲಾ, ಪ್ರಧಾನ ಕಾರ್ಯದರ್ಶಿ  ಪಾಂಡುರಂಗ ಧಾಮಣೆ ಕರ್ ಬೆಳಗಾವಿ ಉತ್ತರ ಮಂಡಲ  ಅಧ್ಯಕ್ಷರು ಕಿರಣ್ ಜಾದವ್  , ಮುಕ್ತಾರ್ ಪಠಾಣ ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button