*ಒಂದೆ ದಿನ 5 ಸಾವಿರಕ್ಕೂ ಅಧಿಕ ಚಿನ್ನದ ಬೆಲೆಯಲ್ಲಿ ಏರಿಕೆ*

ಪ್ರಗತಿವಾಹಿನಿ ಸುದ್ದಿ: ಒಂದೇ ದಿನದಲ್ಲಿ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 5020 ರೂಪಾಯಿ ಹೆಚ್ಚಳ ಆಗುವ ಮೂಲಕ, ಸಾರ್ವಕಾಲಿಕ ಗರಿಷ್ಠ ದರ 1,54,800 ರೂಪಾಯಿಗೆ ಏರಿದೆ.
ಇಂದು ಬುಧವಾರ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 15.480 ರೂಪಾಯಿ ಇದ್ದು, ಒಂದು ಗ್ರಾಂ ಗೆ 502 ರೂಪಾಯಿ ಏರಿಕೆ ಆಗಿದೆ.
10 ಗ್ರಾಂ ಶುದ್ಧ ಚಿನ್ನಕ್ಕೆ 1,54,800 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆ ಇಂದು 5020 ರೂಪಾಯಿ ಏರಿಕೆ ಆಗಿದೆ.
22 ಕ್ಯಾರೆಟ್ 1 ಗ್ರಾಂ ಬೆಲೆ 14, 190 ರೂಪಾಯಿ ಇದ್ದು ಇಂದು 460 ರೂ ಏರಿಕೆ ಆಗಿದೆ. 10ಗ್ರಾಂ ಬೆಲೆ 1,41,900 ರೂಪಾಯಿ ಇದೆ. ಇಂದು 10 ಗ್ರಾಂ ನಲ್ಲಿ 4600 ರೂ ಏರಿಕೆ ಆಗಿದೆ.
ರಾಜ್ಯ ರಾಜಧಾನಿಯಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 14,728 ರೂಪಾಯಿ ಇದ್ದು 10 ಗ್ರಾಂ ಶುದ್ಧ ಚಿನ್ನಕ್ಕೆ 1,47,280 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್ಟಿ ಸೇರಿಲ್ಲ ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ.
ಬೆಳ್ಳಿ ಬೆಲೆ ಇಂದು 10 ರೂಪಾಯಿ ಏರಿಕೆಯಾಗಿದ್ದು, 315 ರೂ ಆಗಿದ್ದು ಕೆಜಿಗೆ 3,15,000 ರೂಪಾಯಿಗೆ ಏರಿದೆ.

