Latest

ಇಂಡಿಯಾ ಬುಕ್ ಆಫ್ ರೆಕಾರ್ಡಗೆ ಪ್ರಮೋದ ಹೆಗಡೆ

ಪ್ರಗತಿವಾಹಿನಿ ಸುದ್ದಿ; ಶಿರಸಿ: ದೇಶದ ವಿವಿಧ ರಾಜ್ಯಗಳ 32 ಲೇಖಕರು ಸೇರಿ ಸಿದ್ದಗೊಳಿಸಿದ ಕವನ ಸಂಕಲನ ಇಂಡಿಯಾ ಬುಕ್ ಆಫ್ ರೆಕಾರ್ಡಗೆ ಸೇರ್ಪಡೆ ಆಗಿದ್ದು, ಈ ಲೇಖಕರ ಪಟ್ಟಿಯಲ್ಲಿ ಉತ್ತರ ಕನ್ನಡ ಮೂಲದ ಕವಿ, ಬರಹಗಾರ ಪ್ರಮೋದ ಮೋಹನ ಹೆಗಡೆ ಕೂಡ ಸೇರ್ಪಡೆ ಆಗಿದ್ದಾರೆ.

ವಿವಿಧತೆಯಲ್ಲಿ ಏಕತೆ ವಿಷಯದ ಕುರಿತು ಪ್ರಕಟಿಸಲಾದ ಕವನ ಸಂಕಲನ ಇದಾಗಿದ್ದು, ಪ್ರಮೋದ ಹೆಗಡೆ ಅವರ ಕನ್ನಡ ಹಾಗೂ ಆಂಗ್ಲ ಭಾಷೆಯ ಕವನಗಳು ಇವೆ. ದೇಶದ ಪ್ರಮುಖ 16 ಭಾಷೆಯಲ್ಲಿ ಕವನಗಳ ಗುಚ್ಚ ಇಲ್ಲಿದೆ. ಕಳೆದ 2020ರ ಮಾರ್ಚ್‌ನ ಲಾಕ್ ಡೌನ್ ಕಾಲದಲ್ಲಿ ಸೇರಿ ಸಂಗ್ರಹಿಸಲಾದ ಕೃತಿ ಈ ವರ್ಷದ ಜನವರಿಯಲ್ಲಿ ಪ್ರಕಟವಾಗಿದೆ. ಅದೀಗ ಇಂಡಿಯಾ ಬುಕ್ ಆಫ್ ರೆಕಾರ್ಡನಲ್ಲೂ ಸೇರ್ಪಡೆ ಆಗಿದೆ.

ಮೂಲತಃ ಕುಮಟಾ ತಾಲೂಕಿನ ಹೆರವಟ್ಟದವರು. ಸೆಲ್ಕೋ ಇಂಡಿಯಾದ ಸಿಇಓ ಮೋಹನ ಹೆಗಡೆ ಹಾಗೂ ಕರಕುಶಲ ಕಲಾವಿದೆ ಉಷಾ ಹೆಗಡೆ ದಂಪತಿ ಪುತ್ರ ಪ್ರಮೋದ ಹೆಗಡೆ, ಇಂಜನೀಯರಿಂಗ್ ಪದವಿ ಪಡೆದು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಫೋಟೊಗ್ರಫಿ ಜತೆಗೆ ಅವ್ಯಕ್ತ ಡಾಟ್ ಮಿ ಎಂಬ ಬ್ಲಾಗ್ ಕೂಡ ನಿರ್ವಹಿಸುತ್ತಾರೆ ಎಂಬುದು ಉಲ್ಲೇಖನೀಯ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button