Sports

*ಇತಿಹಾಸ ಸೃಷ್ಟಿಸಿದ ಭಾರತದ ಚೆಸ್ ಗ್ಯ್ರಾಂಡ್‌ಮಾಸ್ಟ‌ರ್ ಅರ್ಜುನ್ ಎರಿಗೈಸಿ*

ಪ್ರಗತಿವಾಹಿನಿ ಸುದ್ದಿ: ಭಾರತದ ಚೆಸ್ ಗ್ಯ್ರಾಂಡ್‌ಮಾಸ್ಟ‌ರ್ ಅರ್ಜುನ್ ಎರಿಗೈಸಿ ಇತಿಹಾಸ ಸೃಷ್ಟಿಸಿದ್ದಾರೆ. ನಿರಂತರ ಯಶಸ್ಸು ಗಳಿಸುತ್ತಿರುವ ಎರಿಗೈಸಿ, ಚೆಸ್ ಯಾಂಕಿಂಗ್ ವಿಶ್ವದಲ್ಲೇ 2ನೇ ಸ್ಥಾನ ಪಡೆದಿದ್ದಾರೆ. 

ಗುರುವಾರ ಈ ಐತಿಹಾಸಿಕ ಕ್ಷಣಕ್ಕೆ ಚನ್ನೈ ಸಾಕ್ಷಿಯಾಗಿದೆ. ಚೆನ್ನೈನಲ್ಲಿ ನಡೆಯುತ್ತಿರುವ ಗ್ಯಾಂಡ್ ಮಾಸ್ಟರ್ ಟೂರ್ನಮೆಂಟ್ ನಲ್ಲಿ ಅಲೆಕ್ಸಿ ಸರಾನಾ ಅವರನ್ನ 3ನೇ ಸುತ್ತಿನಲ್ಲಿ ಸೋಲಿಸಿದ ಬಳಿಕ ಎರಿಗೈಸಿ, ವಿಶಿಷ್ಟ ಸಾಧನೆ ಮಾಡಿದ್ದಾರೆ.

ಲೈವ್ ರೇಟಿಂಗ್ಸ್ ನಲ್ಲಿ ಅರ್ಜುನ್ ಎರಿಗೈಸಿ 2805 .8 ಪಾಯಿಂಟ್ಸ್ ಗಳಿಸಿದ್ದಾರೆ. ಮ್ಯಾಗ್ನಾಸ್ ಕಾರ್ಲ್ ಸೆನ್ ಮಾತ್ರ 2831.0 ಪಾಯಿಂಟ್ಸ್ ಗಳಿಸಿ ವಿಶ್ವಕ್ಕೆ ಪ್ರಥಮ ಸ್ಥಾನದಲ್ಲಿದ್ದಾರೆ.

ಕೇವಲ 14 ವರ್ಷ ಮತ್ತು 11 ತಿಂಗಳ ವಯಸ್ಸಿನಲ್ಲಿದ್ದಾಗಲೇ ಗ್ಯಾಂಡ್ ಮಾಸ್ಟ‌ರ್ ಪ್ರಶಸ್ತಿ ಗೆದ್ದ ಭಾರತದ ಕಿರಿಯ ಗ್ಯಾಂಡ್ ಮಾಸ್ಟರ್‌ಗಳಲ್ಲಿ ಅರ್ಜುನ್ ಎರಿಗೈಸಿ ಕೂಡಾ ಒಬ್ಬರು. ಅರ್ಜುನ್ ಭಾರತದ 54ನೇ ಗ್ಯಾಂಡ್ ಮಾಸ್ಟರ್. ಅಲ್ಲದೆ ಈ ಸಾಧನೆಯನ್ನು ಮಾಡಿದ ವಿಶ್ವದ 32ನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಈ ಹಿಂದೆ ಪಾತ್ರರಾಗಿದ್ದಾರೆ. ಈಗ 21 ನೇ ವಯಸ್ಸಲ್ಲಿ ವಿಶ್ವಕ್ಕೆ 2ನೇ ಸ್ಥಾನಕ್ಕೆ ಏರಿದ್ದಾರೆ.

Home add -Advt

Related Articles

Back to top button