Belagavi NewsBelgaum NewsEducationKannada NewsKarnataka News

*ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ಬಗ್ಗೆ ಇಲ್ಲಿದ ಮಾಹಿತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 2024-25 ನೇ ಸಾಲಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆ ಕೌನ್ಸಲಿಂಗ್ ಪ್ರಕ್ರಿಯೆಗಳನ್ನು ದಿನಾಂಕ: 04-11-2025 ರಿಂದ 12-11-2025 ರವರೆಗೆ ನಗರದ ಜಿಝಾಮಾತಾ ಮರಾಠಿ ಪ್ರೌಢ ಶಾಲೆ ಚವ್ಹಾಟಗಲ್ಲಿಯಲ್ಲಿ ಜರುಗಲಿದೆ.

ಕೋರಿಕೆ ವರ್ಗಾವಣೆಗಳ ಗಣಕೀಕೃತ ಕೌನ್ಸಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ತಾಲೂಕಿನ ಒಳಗೆ ಮತ್ತು ತಾಲೂಕಿನ ಹೊರಗೆ ಪ್ರಾಥಮಿಕ ಶಿಕ್ಷಕರ ವೃಂದ ದಿನಾಂಕ: 04-11-2025 ರಿಂದ 06-11-2025 ರವರೆಗೆ ಹಾಗೂ ಪ್ರೌಢ ಶಿಕ್ಷಕರ ವೃಂದ ದಿನಾಂಕ: 07-11-2025 ರಿಂದ 10-11-2025 ರವರೆಗೆ ಹಾಗೂ ಪರಸ್ಪರ ವರ್ಗಾವಣೆ ಪ್ರಾಥಮಿಕ ಮತ್ತು ಪ್ರೌಢ ಪ್ರಾಥಮಿಕ/ಪ್ರೌಢ ಶಿಕ್ಷಕರ ವೃಂದ ದಿನಾಂಕ: 11-11-2025 ಪೂರ್ವಾಹ್ನ (ಪ್ರಾಥಮಿಕ) ಹಾಗೂ 11-11-2025 ಅಪರಾಹ್ನ (ಪ್ರೌಢ) ಕೌನ್ಸಲಿಂಗ್ ದಿನಾಂಕವನ್ನು ನಿಗಧಿ ಪಡಿಸಲಾಗಿದೆ.

ಕನಿಷ್ಠ (3 ರಿಂದ 5 ವರ್ಷದೊಳಗಡೆ) ಅವಧಿ ಮುಗಿದ ನಿರ್ದಿಷ್ಟಪಡಿಸಿದ ತಾಂತ್ರಿಕ ಸಹಾಯಕರ ಕೌನ್ಸಲಿಂಗ್ ಪ್ರಾಥಮಿಕ/ಪ್ರೌಢ ಶಿಕ್ಷಕರ ವೃಂದ ದಿನಾಂಕ: 12-11-2025 ರಂದು ಪೂರ್ವಾಹ್ನ (ಪ್ರಾಥಮಿಕ) ಹಾಗೂ ಅಪರಾಹ್ನ (ಪ್ರೌಢ) ಕೌನ್ಸಲಿಂಗ್ ದಿನಾಂಕವನ್ನು ನಿಗಧಿ ಪಡೆಸಲಾಗಿದೆ.

ಆದ್ಯತೆ/ವಿನಾಯಿತಿ ಬಯಸಿರುವ ಶಿಕ್ಷಕರು ಮೂಲ ದಾಖಲೆಗಳೊಂದಿಗೆ ಕೌನ್ಸಲಿಂಗ್‌ನಲ್ಲಿ ಹಾಜರಾಗಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ (ದ) ಉಪನಿರ್ದೇಶಕರು (ಆ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button