Kannada NewsKarnataka News
ಕಾಡು ಜನರಿಗೆ ಆರೋಗ್ಯ ಮಾಹಿತಿ, ದಿನಸಿ ವಿತರಣೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಕೊರೊನ ವೈರಸ್ ದಿಂದ್ ಜನರು ತತ್ತರಿಸಿರುವ ಹಿನ್ನೆಲೆಯಲ್ಲಿ ಕಾಡು ಜನರಿಗೆ ಆರೋಗ್ಯ ಅರಿವು ಮೂಡಿಸುವ ಜೊತೆಗೆ ಆಹಾರ ಸಾಮಗ್ರಿ ವಿತರಿಸಲಾಯಿತು.
ಶ್ರೀದಾನೇಶ್ವರಿ ಸೇವಾ ಸಂಸ್ಥೆ ಹಾಗೂ ಸೆಲ್ಕೋ ಸಂಸ್ಥೆ ಬೆಳಗಾವಿ ಶಾಖೆಯ ಸಿಬ್ಬಂದಿ ಖಾನಾಪುರ ತಾಲೂಕಿನ ಚಾಪೇವಾಡ ಎಂಬ ಗ್ರಾಮದ ಕಾಡು ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿ, ಆಹಾರ ಧಾನ್ಯಗಳನ್ನು ವಿತರಿಸಲಾಯಿತು.




