
ಪ್ರಗತಿವಾಹಿನಿ ಸುದ್ದಿ, ಮಾಂಜರಿ – ಮಹಾರಾಷ್ಟ್ರದ ಕೃಷ್ಣಾ ಹಾಗೂ ಪಂಚಗ೦ಗಾ ನದಿ ಕಣಿವೆಗಳ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿರುವುದರಿಂದ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿ ದಡದ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದ್ದು, ಪೊಲೀಸರು ಭಾನುವಾರ ಪರಿಸ್ಥಿತಿ ಅವಲೋಕನ ನಡೆಸಿದರು.
ಅಂಕಲಿ ಪೋಲಿಸ್ ಠಾಣೆಯ ಪಿ.ಎಸ್.ಐ. ಲಕ್ಷ್ಮಣಪ್ಪ ಆರಿ ನೇತೃತ್ವದಲ್ಲಿ ಇಂದು ಇಂಗಳಿ, ಮಾಂಜರಿ, ಯಡೂರ, ಚಂದೂರ ಗ್ರಾಮಗಳಿಗೆ ಭೇಟ್ಟಿ ನೀಡಿ ಮುಂಜಾಗೃತೆ ಕ್ರಮಗಳ ಬಗ್ಗೆ ಗ್ರಾಮದ ಮುಖಂಡರೊ೦ದಿಗೆ ಚರ್ಚಿಸಿದರು.
ನಂತರ ಕೃಷ್ಣಾ ನದಿ ತೀರಕ್ಕೆ ಭೇಟಿ ನೀಡಿ ಯಾಂತ್ರಿಕ ಮತ್ತು ಮಾನವ ಚಾಲಿತ ಬೋಟ್ ಪರಿಶೀಲಿಸಿದರು. ಮುಖಂಡರಾದ ಗಣಪತಿ ಧನವಾಡೆ, ಕಲ್ಲಪ್ಪ ಕಾಂಬಳೆ, ಮಹಾದವ ಜುಗದಾರ, ರಾಜು ಕೊಳಿ ಹಾಗೂ ಇನ್ನಿತರರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ