Kannada NewsKarnataka NewsLatest

ಶಿವಾಜಿ ಮಹಾರಾಜರಿಗೆ ಅವಹೇಳನ; ರಾತ್ರೋರಾತ್ರಿ ನಗರ ಪೊಲೀಸ್ ಕಮಿಷನರ್ ಭೇಟಿ ಮಾಡಿದ ಶಾಸಕ ಅಭಯ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಛತ್ರಪತಿ ಶಿವಾಜಿ ಮಹಾರಾಜರ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಅಭಯ್ ಪಾಟೀಲ್ ಅವರು ತಡರಾತ್ರಿ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಅವರನ್ನು ಭೇಟಿಯಾಗಿ ಒತ್ತಾಯಿಸಿದರು.

ಮುಸ್ಲಿಂ ಹೆಸರಿನ ಖಾತೆಯಿಂದ ಶಿವಾಜಿ ಮಹಾರಾಜರ ಫೋಟೊ ಅಶ್ಲೀಲವಾಗಿ ಎಡಿಟ್ ಮಾಡಿ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ಅಕೌಂಟ್ ಗೆ ಸಂಬಂಧಿಸಿದ ವ್ಯಕ್ತಿಯನ್ನು  ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಹಿಂದೂ ಧರ್ಮ ಅವಹೇಳನ ಮಾಡಿದವರ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಿದರು.

ಇದಕ್ಕೆ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ರಮೇಶ ಜಾರಕಿಹೊಳಿ ಸೇರಿ ಮೂವರ ವಿರುದ್ಧ ಕೆಲವೇ ಹೊತ್ತಿನಲ್ಲಿ ದೂರು

Home add -Advt

https://pragati.taskdun.com/comgress-is-going-to-lodge-a-complaint-against-ramesh-jarakiholi-and-three-others/

ಏಪ್ರೀಲ್ ಕೊನೆ ಅಥವಾ ಮೇ ಮೊದಲ ವಾರದಲ್ಲಿ ಚುನಾವಣೆ – ಬಾಲಚಂದ್ರ ಜಾರಕಿಹೊಳಿ

https://pragati.taskdun.com/election-in-late-april-or-first-week-of-may-balachandra-jarakiholi/

ಹೆಚ್ಚುವರಿ ಶಿಕ್ಷಕರ ಕೌನ್ಸಲಿಂಗ್ ಹಠಾತ್ ಸ್ಥಗಿತ; ಸಾಮಾನ್ಯ ವರ್ಗಾವಣೆಗೆ ಮತ್ತೆ ಗ್ರಹಣ?

https://pragati.taskdun.com/sudden-stoppage-of-counseling-of-additional-teachers-what-will-be-the-normal-transfer/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button