ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವೆಬ್ ಸೈಟ್, ಗೇಮ್ ಹ್ಯಾಕ್ ಮಾಡಲು ಏಕಾಗ್ರತೆ ಮುಖ್ಯ. ಹಾಗಾಗಿ ಏಕಾಗ್ರತೆಗಾಗಿ ನಾನು ಭಗವದ್ಗೀತೆ ಓದುತ್ತೇನೆ. ಬಳಿಕ ಕೆಲ ಸಮಯ ಧ್ಯಾನ ಮಾಡುತ್ತೇನೆ ಎಂದು ಬಂಧಿತ ಅಂತರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವಿಚಾರಣೆ ವೇಳೆ ಹೇಳಿದ್ದಾನೆ.
ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಅಂತರಾಷ್ಟ್ರೀಯ ಹ್ಯಾಕರ್ ಶ್ರೀಕಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಸಿಸಿಬಿ ಅಧಿಕಾರಿಗಳು ಹ್ಯಾಕರ್ ನ ಏಕಾಗ್ರತೆ ರಹಸ್ಯ ಕೇಳಿ ಶಾಕ್ ಆಗಿದ್ದಾರೆ. ಬಂಧನದ ವೇಳೆಯೂ ಭಗವದ್ಗೀತೆ ಕೈಲಿ ಹಿಡಿದು ಬಂದಿದ್ದ ಶ್ರೀಕಿ, ಇದೀಗ ವಿಚಾರಣೆ ವೇಳೆ ಹ್ಯಾಕಿಂಗ್ ಮಾಡಲು ಮನಸ್ಸಿನ ಏಕಾಗ್ರತೆಬೇಕು ಹಾಗಾಗಿ ಏಕಾಗ್ರತೆ ಬೇಕು ಹಾಗಾಗಿ ನಾನು ಪ್ರತಿದಿನ ಭಗವದ್ಗೀತೆ ಓದುತ್ತೇನೆ. ಬಳಿಕ ಧ್ಯಾನ ಮಾಡುತ್ತೇನೆ. ಅಲ್ಲದೇ ಆಧ್ಯಾತ್ಮ ಚಿಂತಕರ ಆತ್ಮಚರಿತ್ರೆಗಳನ್ನು ಓದುತ್ತೇನೆ. ನನಗೆ ಹ್ಯಾಕಿಂಗ್ ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ ಎಂದಿದ್ದಾನೆ.
ಜಾಮೀನು ಪಡೆದು ಜೈಲಿನಿಂದ ಹೋದ ಬಳಿಕವೂ ಹ್ಯಾಕಿಂಗ್ ನಿಲ್ಲಿಸಲ್ಲ. ಇನ್ಮುಂದೆ ಸ್ಥಳೀಯ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡುವುದಿಲ್ಲ. ಚೀನಾ ಹಾಗೂ ವಿದೇಶಿ ಆನ್ ಲೈನ್ ಗೇಮಿಂಗ್ ವೆಬ್ ಸೈಟ್ ಹ್ಯಾಕ್ ಮಾಡುತ್ತೇನೆ ಎಂದಿದ್ದಾನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ