Belagavi NewsBelgaum NewsKannada NewsKarnataka NewsNationalPolitics

*ಮದ್ಯದಂಗಡಿಗಾಗಿ ಅರ್ಜಿ ಆಹ್ವಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಅಬಕಾರಿ ಇಲಾಖೆಯಲ್ಲಿ ಸ್ಥಗಿತಗೊಂಡಿರುವ/ಮಂಜೂರಾಗದೇ ಬಾಕಿ ಇರುವ ಒಟ್ಟು 21 ವಿವಿಧ ಸನ್ನದುಗಳ ಪೈಕಿ ಬೆಳಗಾವಿ ದಕ್ಷಿಣ ಜಿಲ್ಲೆಯ ವ್ಯಾಪ್ತಿಯ ಬೈಲಹೊಂಗಲ-01 ಸಿಎಲ್-2ಎ, ಬೆಳಗಾವಿ ವಲಯ-1 ರಲ್ಲಿ 02 ಸಿಎಲ್-2ಎ, ಬೆಳಗಾವಿ ವಲಯ-3 ರಲ್ಲಿ 02 ಸಿಎಲ್-2ಎ, ಖಾನಾಪೂರ ವಲಯದಲ್ಲಿ 01 ಸಿಎಲ್-2ಎ, ರಾಮದುರ್ಗ ವಲಯದಲ್ಲಿ 01 ಸಿಎಲ್-2ಎ, ಸವದತ್ತಿ ವಲಯದಲ್ಲಿ 01 ಸಿಎಲ್-2ಎ, ಹಾಗೂ ಬೆಳಗಾವಿ ವಲಯ ನಂ 1,2 &3 ರಲ್ಲಿ ತಲಾ ಒಂದರಂತೆ ಒಟ್ಟು 3ಸಿಎಲ್-9ಎ ಹೀಗೆ ಒಟ್ಟು 11 ವಿವಿಧ ನಮೂನೆಯ ಸನ್ನದುಗಳನ್ನು ಭಾರತ ಸರ್ಕಾರ ಸ್ವಾಮ್ಯದ ಸಂಸ್ಥೆಯಾದ ಎಂ.ಎಸ್.ಟಿ.ಸಿ. ಲಿಮಿಟೆಡ್‌ನ ಇ-ಪೋರ್ಟಲ್ ನಲ್ಲಿ ಇ-ಹರಾಜನ್ನು ದಿನಾಂಕ: 20-01-2025 ರಂದು ಹಮ್ಮಿಕೊಳ್ಳಲಾಗಿದೆ.

ಅದೆ ರೀತಿ ಬೆಳಗಾವಿ ಉತ್ತರ ಜಿಲ್ಲೆ ಚಿಕ್ಕೋಡಿ ವ್ಯಾಪ್ತಿಯ ಅಥಣಿ ವಲಯದಲ್ಲಿ 01 ಸಿಎಲ್-2ಎ, ಚಿಕ್ಕೋಡಿ ವಲಯದಲ್ಲಿ 02 ಸಿಎಲ್-2ಎ, ಗೋಕಾಕ ವಲಯದಲ್ಲಿ 03 ಸಿಎಲ್-2ಎ, ಹುಕ್ಕೇರಿ ವಲಯದಲ್ಲಿ 03 ಸಿಎಲ್-2ಎ ಹಾಗೂ ರಾಯಬಾಗ ವಲಯದಲ್ಲಿ 01 ಸಿಎಲ್-2ಎ ಸನ್ನದುಗಳು ಹೀಗೆ ಒಟ್ಟು 10 ವಿವಿಧ ನಮೂನೆಯ ಸನ್ನದುಗಳನ್ನು ಭಾರತ ಸರ್ಕಾರ ಸ್ವಾಮ್ಯದ ಸಂಸ್ಥೆಯಾದ ಎಂ.ಎಸ್.ಟಿ.ಸಿ. ಅಮಿಟಿಡ್ ಇ-ಪೋರ್ಟಲ್ ನಲ್ಲಿ ಇ-ಹರಾಜನ್ನು ದಿನಾಂಕ: 16-01-2026 ರಂದು ನಡೆಯಲಿದೆ.

ಸದರಿ ಇ-ಹರಾಜು ಪ್ರಕ್ರಿಯೆ ಕುರಿತು ದಿನಾಂಕ: 03-01-2026 ರಂದು ಜಿಲ್ಲಾ ಪಂಚಾಯತ ಸಭಾ ಭವನ, ಕಛೇರಿ ಗಲ್ಲಿ ಬೆಳಗಾವಿ ಇಲ್ಲಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಸದರಿ ತರಬೇತಿ ಮತ್ತು ಇ-ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ದಕ್ಷಿಣ ಜಿಲ್ಲೆ ಅಬಕಾರಿ ಉಪ ಆಯುಕ್ತರ ಕಛೇರಿ ದೂರವಾಣಿ ಸಂಖ್ಯೆ: 0831-2950219 & 9449597069, ಬೆಳಗಾವಿ ಉತ್ತರ ಜಿಲ್ಲೆ ಚಿಕ್ಕೋಡಿ ಅಬಕಾರಿ ಉಪ ಆಯುಕ್ತರ ಕಛೇರಿ ದೂರವಾಣಿ ಸಂಖ್ಯೆ: 08338-275727 & 9449597077 ಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಜಿಲ್ಲೆ (ದಕ್ಷಿಣ) ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೆಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button