Belagavi NewsBelgaum NewsKarnataka News

*ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅರ್ಜಿ ಆಹ್ವಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾನಗರ ಪಾಲಿಕೆ ವ್ಯಾಪ್ತಿಯ ಸನ್ 2025-26 ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿ ಅನುದಾನ ಶೇ.7.25 ಹಾಗೂ ಶೇ.5ರ ಯೋಜನೆಯಡಿಯಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ ಸಹಾಯಧನ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತೆ

Home add -Advt

ಅರ್ಜಿದಾರರು ಬೆಳಗಾವಿ ಮಹಾನಗರ ಪಾಲಿಕೆಯ ರಹವಾಸಿಯಾಗಿರಬೇಕು. ಸಕ್ಷಮ ಪ್ರಾಧಿಕಾರದಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣಪತ್ರ (ಆದಾಯ ಗರಿಷ್ಠ ಮಿತಿ: ರೂ.3.00 ಲಕ್ಷ) ಪಡೆದಿರಬೇಕು. ಪಡಿತರ ಚೀಟಿ, ಆಧಾರ ಕಾರ್ಡ್, ಜನನ ಪ್ರಮಾಣ ಪತ್ರ, ಹಾಗೂ ವಿಶೇಷಚೇತನ ಅರ್ಜಿದಾರರು ಅಂಗವಿಕಲತೆಯ ಗುರುತಿನ ಚೀಟಿ ಜೊತೆಗೆ ಪ್ರಮಾಣ ಪತ್ರ ಹೊಂದಿರಬೇಕು. ದಾಖಲೆಗಳು ಹೊಂದಿರುವುದು ಕಡ್ಡಾಯವಾಗಿರುತ್ತದೆ.

ವಾರ್ಡ್ ಸಂಖ್ಯೆ 1 ರಿಂದ 58 ರಲ್ಲಿ ಇರುವ ಹಿಂದುಳಿದ ವರ್ಗ ಹಾಗೂ ವಿಶೇಷಚೇತನರಾಗಿದ್ದು ಬೆಳಗಾವಿ ನಗರದ ರಹವಾಸಿಯಾಗಿದ್ದವರಿಗೆ, ಶೇ.7.25 ರ ಇತರೇ ಹಿಂದುಳಿದ ವರ್ಗದ ಹಾಗೂ ಶೇ.5 ರ ವಿಶೇಷಚೇತನರ ಯೋಜನೆಯಡಿ 6 ವರ್ಷದವರೆಗೆ ಹಾಗೂ 7 ವರ್ಷದಿಂದ 13 ವರ್ಷದ ಮಕ್ಕಳಿಗೆ ಜೀವವಿಮೆ ಸಿಂಗಲ್ ಪ್ರೀಮಿಯಂ ಪಾವತಿಸುವುದು.

ಆಸಕ್ತ ಫಲಾನುಭವಿಗಳು ಮೇ.25 ರೊಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಮಹಾನಗರ ಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶದಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅವಧಿ ಮೀರಿ ಬಂದಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಮಹಾನಗರ ಪಾಲಿಕೆಯ ವೆಬ್ ಸೈಟಿ www.belagavicity.mrc.gov.in ಗೆ ಭೇಟಿ ನೀಡಿ, ಮಾಹಿತಿ ಪಡೆಯಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button