ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಐಪಿಎಲ್ 2022ರ ಆಟಗಾರರ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಆರಂಭವಾಗಿದ್ದು, 590 ಆಟಗಾರರು ಹರಾಜು ಸುತ್ತಿಗೆ ಅಂತಿಮಗೊಂಡಿದ್ದಾರೆ.
ಎರಡು ದಿನಗಳ ಕಾಲ ನಡೆಯಲಿರುವ ಐಪಿಎಲ್ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಈ ಬಾರಿಯ ಐಪಿಎಲ್ ಹರಾಜಿಗಾಗಿ ಒಟ್ಟು ವಿಶ್ವಾದ್ಯಂತ 1214 ಆಟಗಾರರು ಹೆಸರು ನೊಂದಾಯಿಸಿದ್ದರು. ಆದರೆ ಈ ಪಟ್ಟಿಯಲ್ಲಿ ಬಿಸಿಸಿಐ 590 ಆಟಗಾರರನ್ನು ಮಾತ್ರ ಹರಾಜು ಸುತ್ತಿಗೆ ಅಂತಿಮಗೊಳಿಸಿದೆ. ಇದರಲ್ಲಿ 370 ಭಾರತೀಯ ಆಟಗಾರರಾಗಿದ್ದರೆ, 220 ವಿದೇಶಿ ಆಟಗಾರರಾಗಿದ್ದಾರೆ.
ಐಪಿಎಲ್ 2022ರ ಹರಾಜಿನಲ್ಲಿ ಶಿಖರ್ ಧವನ್ ಮೊದಲ ಆಟಗಾರರಾಗಿ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಬರೋಬ್ಬರಿ 8.25 ಕೋಟಿಗೆ ಧವನ್ ಅವರನ್ನು ಪಂಜಾಬ್ ತಂದ ಖರೀದಿಸಿದೆ. 5 ಕೋಟಿ ಮೊತ್ತಕ್ಕೆ ಆರ್.ಅಶ್ವಿನ್ ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗಿದ್ದಾರೆ.
ಆಸ್ಟ್ರೇಲಿಯಾ ಟೆಸ್ಟ್ ನಾಯಕ ಪ್ಯಾಟ್ ಕಮಿಕ್ಸ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 7.25 ಕೋಟಿ ಮೊತ್ತಕ್ಕೆ ಖರೀದಿಸಿದೆ. ಆಫ್ರಿಕಾ ಮಾರಕ ವೇಗಿ ಕಗಿಸೋ ರಬಾಡ ದಾಖಲೆ ಮೊತ್ತಕ್ಕೆ ಸೇಲ್ ಆಗಿದ್ದು, ಬರೋಬ್ಬರಿ 9.25 ಕೋಇಗೆ ಪಂಜಾಬ್ ಕಿಂಗ್ಸ್ ಫಾಂಚೈಸಿ ಖರೀದಿ ಮಾಡಿದೆ.
ನ್ಯೂಜಿಲ್ಯಾಂಡ್ ತಂಡದ ಘಾತಕ ವೇಗಿ ಟ್ರೆಂಟ್ ಬೌಲ್ಟ್ 8 ಕೋಟಿಗೆ ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗಿದ್ದಾರೆ. ಫಾಫ್ ಡುಪ್ಲೆಸಿಸ್ ಅಂತಿಮವಾಗಿ ಬರೋಬ್ಬರಿ 7 ಕೋಟಿಗೆ ಆರ್ಸಿಬಿ ತಂಡದ ಪಾಲಾಗಿದ್ದರೆ, ಡೇವಿಡ್ ವಾರ್ನರ್ 6.25 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ. ಶ್ರೇಯಸ್ ಅಯ್ಯರ್ 12.25 ಕೋಟಿಗೆ ಕೆ ಕೆ ಆರ್ ತಂಡದ ಪಾಲಾಗಿದ್ದಾರೆ.
ದಿನೇಶ್ ಕಾರ್ತಿಕ್ 5.50 ಕೋಟಿಗೆ ಆರ್ ಸಿಬಿ ಪಾಲಾಗಿದ್ದರೆ, 15.25 ಕೋಟಿಗೆ ಇಶಾನ್ ಕಿಶನ್ ಮುಂಬೈ ಪಾಲಾಗಿದ್ದಾರೆ. ವಾಷಿಂಗ್ಟನ್ ಸುಂದರ್ ಅವರನ್ನು ಬರೋಬ್ಬರಿ 8.75 ಕೋಟಿಗೆ ಸನ್ರೈಸರ್ಸ್ ಹೈದರಾಬಾದ್ ಖರೀದಿ ಮಾಡಿದೆ. ವೆಸ್ಟ್ ಇಂಡೀಸ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ನಿಕೋಲಸ್ ಪೂರನ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ 10.75 ಕೋಟಿಗೆ ಖರೀದಿಸಿತು. ಸನ್ ರೈಸರ್ಸ್ ಹೈದರಾಬಾದ್ ತನ್ನ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಮತ್ತೊಮ್ಮೆ ಖರೀದಿಸಿದ್ದು, 4 ಕೋಟಿಯಷ್ಟು ಅತಿ ಹೆಚ್ಚು ಬಿಡ್ ಮಾಡಿದೆ.
ಭಾರತದ ಆಲ್ರೌಂಡರ್ ಶಾರ್ದೂಲ್ ಠಾಕೂರ್ 10.75 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ನ ಭಾಗವಾಗಿದ್ದಾರೆ. ಇಂಗ್ಲೆಂಡ್ ವೇಗದ ಬೌಲರ್ ಮಾರ್ಕ್ ವುಡ್ ಮೊದಲ ಬಾರಿಗೆ ಐಪಿಎಲ್ನ ಭಾಗವಾಗಿದ್ದು, 7.50 ಕೋಟಿಗೆ ಅವರನ್ನು ಲಕ್ನೋ ಖರೀದಿಸಿದೆ. ದಕ್ಷಿಣ ಆಫ್ರಿಕಾದ ಅಂಡರ್-19 ಸೆನ್ಸೇಷನ್ ಡೆವಾಲ್ಡ್ ಬ್ರೆವಿಸ್ ಅವರನ್ನು ಮುಂಬೈ ಇಂಡಿಯನ್ಸ್ 3 ಕೋಟಿಗೆ ಖರೀದಿಸಿದೆ. ಭಾರತದ ಅನ್ ಕ್ಯಾಪ್ಡ್ ಆಟಗಾರ ಅಶ್ವಿನ್ ಹೆಬ್ಬಾರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಮೂಲ ಬೆಲೆ 20 ಲಕ್ಷಕ್ಕೆ ಖರೀದಿಸಿದೆ.
ರಾಜ್ಯಾದ್ಯಂತ PU ಕಾಲೇಜುಗಳಿಗೆ ರಜೆ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ