
ಪ್ರಗತಿವಾಹಿನಿ ಸುದ್ದಿ: ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ಮುಂದುವರೆದಿರುವ ಹಿನ್ನೆಲೆಯಲ್ಲಿ ಭಾರತೀಯ ಪ್ರಜೆಗಳು, ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಇರಾನ್ ನಿಂದ ಅರ್ಮೇನಿಯಾ ಗಡಿ ಮೂಲಕವಾಗಿ ಭಾರತೀಯರನ್ನು ಸ್ಥಳಾತರಿಸಲಾಗುತ್ತಿದೆ.
ಈಗಾಗಲೇ 110 ಭಾರತೀಯ ವಿದ್ಯಾರ್ಥಿಗಳನ್ನು ಮೊದಲ ಹಂತದಲ್ಲಿ ಕರೆತರಲಾಗಿದೆ. ಹಂತ ಹಂತವಾಗಿ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಕ್ರಮ ಕೈಗೊಂಡಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಈ ನಡುವೆ ಇರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಹಾಯವಾಣಿ ತೆರೆದಿದೆ. ಇರಾನ್ ನಲ್ಲಿರುವ ಭಾರತೀಯರು ಸಂಪರ್ಕಿಸುವಂತೆ ಕೋರಲಾಗಿದೆ.
ಹೆಲ್ಪ್ ಲೈನ್ ನಂ: + 989010144557, +989128109115, +989128109109 ಈ ಸಂಖ್ಯೆಗೆ ಕರೆ ಮಾಡಲು ಸೂಚಿಸಲಾಗಿದೆ.
ಭಾರತೀಯರು ತಮ್ಮ ಸ್ಥಳ, ಸಂಪರ್ಕ ಸಂಖ್ಯೆ ಒದಗಿಸುವಂತೆ ರಾಯಭಾರ ಕಚೇರಿ ತಿಳಿಸಿದೆ.