Kannada NewsLatestNational

*ಗೆಳೆಯನ ಮುಂದೆಯೇ ಯುವತಿ ಹೊತ್ತೊಯ್ದು ಗ್ಯಾಂಗ್ ರೇಪ್: 8 ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ರಾಜಾ ಫೆಸ್ಟಿವಲ್ ಗೆ ಗೆಳೆಯನ ಜೊತೆ ಹೋಗಿದ್ದ ಯುವತಿಯನ್ನು ಕಾಮುಕರು ಹೊತ್ತೊಯ್ದು ಗ್ಯಾಂಗ್ ರೇಪ್ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ೮ ಆರೋಪಿಗಳನ್ನು ಬಂಧಿಸಲಾಗಿದೆ.

ಒಡಿಶಾದ ಗೋಪಾಲಪುರ ಬೀಚ್ ನಲ್ಲಿ ರಾಜಾ ಫೆಸ್ಟಿವಲ್ ಗೆ ತನ್ನ ಬಾಯ್ ಫ್ರೆಂಡ್ ಜೊತೆ ತೆರಳುದ್ದ 20ವರ್ಷದ ಯುವತಿ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಭಾನುವಾರ ಈ ಘಟನೆ ನಡೆದಿತ್ತು. ಫೆಸ್ಟಿವಲ್ ವೀಕ್ಷಿಸುತ್ತಿದ್ದ ವೇಳೆ ಮೂರು ಬೈಕ್ ಗಳಲ್ಲಿ ಬಮ್ದ ಹತ್ತು ಜನರು, ಯುವತಿ ಹಾಗೂ ಆಕೆಯ ಗೆಳೆಯನನ್ನು ಸುತ್ತುವರೆದಿದ್ದಾರೆ.

ಈ ವೇಳೆ ಯುವಕನ ಮೇಲೆ ಹಲ್ಲೆ ನಡೆಸಿ ಆತನ ಕೈಗಳನ್ನು ಕಟ್ಟಿ ಹಾಕಿದ್ದಾರೆ. ಬಳಿಕ ಯುವತಿಯನ್ನು ಎಳೆದೊಯ್ದಿದ್ದಾರೆ. ಹೀಗೆ ಯುವತಿಯನ್ನು ಎಳೆದೊಯ್ದ ದುಷ್ಕರ್ಮಿಗಳು ಅಜ್ಞಾತ ಸ್ಥಳದ ಮನೆಗೆ ಕರೆದೊಯ್ದು ಗ್ಯಾಂಗ್ ರೇಪ್ ನಡೆಸಿದ್ದಾರೆ. ಯುವಕ ಗೋಪಾಲಪುರದ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಸದ್ಯ ಪ್ರಕರಣ ಸಂಬಂಧ 8 ಆರೋಪಿಗಳನ್ನು ಬಂಧಿಸಲಾಗಿದೆ, ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button