Kannada NewsKarnataka NewsNationalPolitics

*ಶ್ರೀಲಂಕಾ ಬಳಿ ಅಮೆರಿಕಾದ ಜಲಾಂತರ್ಗಾಮಿ ದಾಳಿಗೆ ಇರಾನ್‌ನ ಯುದ್ಧನೌಕೆ ಉಡಿಸ್: 148 ನಾವಿಕರು ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ಅಮೆರಿಕದ ಜಲಾಂತರ್ಗಾಮಿ ದಾಳಿಗೆ ಇರಾನ್‌ನ ಯುದ್ಧನೌಕೆ ಐರಿಸ್ ದೇನಾ ಮುಳುಗಡೆಯಾಗಿರುವ ಘಟನೆ ಶ್ರೀ ಲಂಕಾದ ಕರಾವಳಿಯಲ್ಲಿ ನಡೆದಿದೆ.

ನೌಕೆ ಮುಳುಗಿದ ಪರಿಣಾಮವಾಗಿ ಕನಿಷ್ಠ 148 ನಾವಿಕರು ನಾಪತ್ತೆಯಾಗಿದ್ದು, 78 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 32 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಶ್ರೀಲಂಕಾದ ಅಧಿಕಾರಿಗಳು ರಕ್ಷಿಸಿದ್ದಾರೆ. ನಾಪತ್ತೆಯಾದವರಿಗಾಗಿ ಬೃಹತ್ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ.

ಐರಿಸ್ ದೇನಾ ಯುದ್ಧನೌಕೆಯು ಇತ್ತೀಚೆಗೆ ಭಾರತದ ವಿಶಾಖಪಟ್ಟಣದಲ್ಲಿ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಫೀಟ್ ರಿವ್ಯೂ / ಮಿಲನ್ 2026’ ಅಭ್ಯಾಸದಲ್ಲಿ ಭಾಗವಹಿಸಿತ್ತು. 

ಅಭ್ಯಾಸ ಮುಗಿಸಿ ಇರಾನ್‌ಗೆ ವಾಪಸ್ ಆಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಈ ಘಟನೆ ಅಂತರರಾಷ್ಟ್ರೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

Home add -Advt

Related Articles

Back to top button