Kannada NewsLatest

ಕೇಂದ್ರದ ವಿರುದ್ಧ ಕುಮಾರಣ್ಣ ಗರಂ, ಪ್ರವಾಹ ಪರಿಹಾರಕ್ಕೆ ಆಗ್ರಹ

ಕೇಂದ್ರದ ವಿರುದ್ಧ ಕುಮಾರಣ್ಣ ಗರಂ, ಪ್ರವಾಹ   ಪರಿಹಾರಕ್ಕೆ ಆಗ್ರಹ

ಪ್ರಗತಿವಾಹಿನಿ ಸುದ್ದಿ  – ಬೆಂಗಳೂರು : ಪ್ರವಾಹದಿಂದಾಗಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಪ್ರದೇಶಗಳಿಗೆ ತೀವ್ರ ಹಾನಿಯಾಗಿದೆ. ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ನಿರ್ಮಲಾ ಸೀತಾರಾಮನ್ ಅವರ ವೈಮಾನಿಕ ಸಮೀಕ್ಷೆಯ ಹೊರತಾಗಿಯೂ ಪರಿಹಾರವನ್ನು ನೀಡದಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೈಮಾನಿಕ ಸಮೀಕ್ಷೆ ನಡೆಸಿದ ಕೇಂದ್ರ ಸಚಿವರು ಪ್ರವಾಹ ಸಂತ್ರಸ್ತರಿಗೆ ಧೈರ್ಯ ತುಂಬುವ ಯಾವುದೇ ಪ್ರಯತ್ನ ನಡೆದಿಲ್ಲ ಮತ್ತು ಅವರು ಕನಿಷ್ಠ ಪರಿಹಾರವನ್ನು ಸಹ ಘೋಷಿಸಿಲ್ಲ ಎಂದು ಕಿಡಿಕಾರಿದರು. ಈ ಸಂದರ್ಭದಲ್ಲಿ ಅಧಿಕಾರಿಗಳ ಪಾತ್ರ ನಿರ್ಣಾಯಕವಾಗಿದೆ, ಎಂದಿದ್ದಾರೆ.
ಅಲ್ಲದೆ, ರೈತರ ಸ್ಥಿತಿ ಗಂಭೀರವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಅರ್ಥವಾಗದಿದ್ದರೆ ಸಾಮಾನ್ಯ ಜನರು ರಸ್ತೆಗಿಳಿಯುತ್ತಾರೆ. ಕಳೆದ ನಾಲ್ಕು ದಶಕಗಳಲ್ಲಿ ರಾಜ್ಯದಲ್ಲಿ ಈ ರೀತಿ ಘೋರ ಮಳೆಯಾಗಿಲ್ಲ. ಬೆಳಗಾವಿಯ ಜನರ ಜೀವನ ಶೋಚನೀಯವಾಗಿದ್ದು, ಬಾಗಲಕೋಟೆ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬಹಳಷ್ಟು ಹಾನಿಯಾಗಿದೆ, ಎಂದರು.
ಚಿಕ್ಕಮಗಳೂರು ಮತ್ತು ಹಾಸನ ಕೂಡ ನಷ್ಟ ಅನುಭವಿಸಿದೆ. 17 ಜಿಲ್ಲೆಗಳಲ್ಲಿ 2 ಕೋಟಿ ಜನರು ಪ್ರವಾಹದಿಂದ ಬಳಲುತ್ತಿದ್ದಾರೆ ಮತ್ತು ಸುಮಾರು 5 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ವರ್ಷ ಕೇಂದ್ರ ಸರ್ಕಾರ ಯಾವ ರೀತಿಯಲ್ಲಿ ಪರಿಹಾರ ನೀಡಿತು … ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಟೀಕಿಸಿದರು. ಈ ತಿಂಗಳ 16 ರ ನಂತರ ಮತ್ತೊಮ್ಮೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ಅವರು ತಿಳಿಸಿದರು.////

Related Articles

Back to top button