
ಪ್ರಗತಿವಾಹಿನಿ ಸುದ್ದಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್ ಸೇರುತ್ತೇನೆ ಎಂದರೂ ನಮ್ಮ ಪಕ್ಷ ಅವರನ್ನು ಸೇರಿಸಿಕೊಳ್ಳೋದು ಅಷ್ಟು ಸುಲಭವಿಲ್ಲ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಯತ್ನಾಳ್ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಪಕ್ಷಕ್ಕೂ ಯತ್ನಾಳ್‌ಗೂ ಯಾವುದೇ ಸಂಬಂಧ ಇಲ್ಲ. ನಮ್ಮ ಪಕ್ಷಕ್ಕೆ ಬರುತ್ತೇನೆಂದು ಯತ್ನಾಳ್ ಯಾವುದೇ ಅರ್ಜಿ ಹಾಕಿಲ್ಲ. ಅವರು ಅರ್ಜಿ ಹಾಕದೇ ನಾನು ಮಾತನಾಡೋದು ಸೂಕ್ತ ಅಲ್ಲ. ಒಂದು ವೇಳೆ ಅವರು ಅರ್ಜಿ ಹಾಕಿದರೂ ಅವರು ನಮ್ಮ ಪಕ್ಷಕ್ಕೆ ಬರೋದು ತುಂಬಾ ಕಷ್ಟ ಇದೆ ಎಂದರು.
ಅವರು ಒಂದು ಸಮುದಾಯವನ್ನು ಒಂದು ಧರ್ಮದ ಜನರನ್ನು ಬೇಕಾಬಿಟ್ಟಿ ಅಪಮಾನ ಮಾಡಿದ್ದಾರೆ, ಕೀಳಾಗಿ ಮಾತನಾಡಿದ್ದಾರೆ. ಹೀಗಾಗಿ ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳೋದು ಕಷ್ಟ. ನಾವು ನಾವಾಗೇ ಅವರು ಬರ್ತಾರಾ, ಹೋಗ್ತಾರಾ ಎಂಬ ಬಗ್ಗೆ ಚರ್ಚೆ ಮಾಡೋದು ಸರಿಯಲ್ಲ ಎಂದರು.