Latest

*ಮತ್ತೆ ಸಿಎಂ ಹುದ್ದೆ ಜಪ ಮಾಡಿದ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ; ಮೈಸೂರು: ವಿಧಾನಸಭಾ ಚುನಾವಣೆಗೆ ಕೇವಲ 5 ದಿನಗಳು ಮಾತ್ರ ಬಾಕಿಯಿದ್ದು, ರಾಜಕೀಯ ಪಕ್ಷಗಳ ನಾಯಕರ ಪರ ಸ್ಟಾರ್ ನಟ-ನಟಿಯರು ಅಬ್ಬರದ ರೋಡ್ ಶೋ, ಪ್ರಚಾರ ನಡೆಸಿದ್ದಾರೆ.

ವರುಣಾದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಸಿಎಂ ಹುದ್ದೆ ಜಪ ಮಾಡಿದ್ದಾರೆ. ವರುಣಾ ಕ್ಷೇತ್ರದಲ್ಲಿ 20೦8ರಲ್ಲಿ ಗೆದ್ದು ವಿಪಕ್ಷ ನಾಯಕನಾದೆ. 2013ರಲ್ಲಿ ಗೆದ್ದು ಮುಖ್ಯಮಂತ್ರಿಯಾದೆ. ಈಗ ಮತ್ತೊಂದು ಅವಕಾಶ ಇದೆ. ಪ್ರಚಾರದ ವೇಳೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.

Home add -Advt

ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ನಾನು ವರುಣಾದಲ್ಲಿ ಗೆಲ್ಲುವುದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

https://pragati.taskdun.com/pm-narendra-modibangalore-visitraod-banda/


Related Articles

Back to top button