Belagavi NewsBelgaum NewsElection NewsKannada NewsKarnataka NewsPolitics

ಬೆಳಗಾವಿಯಲ್ಲಿ ಬಾಡಿಗೆ ಮನೆ ಮಾಡಿದ ಜಗದೀಶ ಶೆಟ್ಟರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನನ್ನ ಕರ್ಮ ಭೂಮಿ, ಬೆಳಗಾವಿಯಲ್ಲೇ ಮನೆ ಮಾಡುತ್ತೇನೆ ಎಂದು ಟಿಕೆಟ್ ಘೋಷಣೆಯಾದ ಸಂದರ್ಭದಲ್ಲಿ ಹೇಳಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಇದೀಗ ಬಾಡಿಗೆ ಮನೆ ಮಾಡಿದ್ದಾರೆ.

Home add -Advt

ಇಲ್ಲಿಯ ಕುಮಾರಸ್ವಾಮಿ ಬಡಾವಣೆಯಲ್ಲಿ ಎರಡು ಮಹಡಿಯ ಬಾಡಿಗೆ ಮನೆಯೊಂದನ್ನು ಹಿಡಿದಿದ್ದು ಯುಗಾದಿಯ ಸಂದರ್ಭದಲ್ಲಿ ಪೂಜೆ ಮಾಡಿ ಮನೆ ಪ್ರವೇಶಿಸಿದ್ದಾರೆ.

ಒಂದು ಹಂತದಲ್ಲಿ ಚುನಾವಣೆ ಫಲಿತಾಂಶ ನೋಡಿ ಬೆಳಗಾವಿಯಲ್ಲಿ ಮನೆ ಮಾಡುವ ಯೋಚನೆಯನ್ನು ಜಗದೀಶ್ ಶೆಟ್ಟರ್ ಮಾಡಿದ್ದಾರೆ ಎನ್ನುವ ಸುದ್ದಿ ಕೂಡ ಹರಡಿತ್ತು. ಆದರೆ, ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಅಡ್ರೆಸ್ ಯಾವುದು ಎನ್ನುವ ಪ್ರಶ್ನೆ ಎದ್ದಾಗ, ಶೆಟ್ಟರ್ ಜೊತೆಗೆ ಬಿಜೆಪಿ ಮುಖಂಡರೂ ನಿರುತ್ತರರಾಗುತ್ತಿದ್ದರು. ಕೊನೆಗೆ, ಸುರೇಶ ಅಂಗಡಿ ಅವರ ಮನೆಯೆ ಜಗದೀಶ್ ಶೆಟ್ಟರ್ ಅಡ್ರೆಸ್ ಎಂದು ಸಮರ್ಥಿಸಿಕೊಳ್ಳುವ ಯತ್ನ ನಡೆದಿತ್ತು.

ಇದೀಗ, ರಾಯಬಾಗ ಮೂಲಕ ವ್ಯಕ್ತಿಯೊಬ್ಬರು ಕುಮಾರಸ್ವಾಮಿ ಬಡಾವಣೆಯಲ್ಲಿ ಕಟ್ಟಿಸಿದ್ದ ಮನೆಯನ್ನು ಬಾಡಿಗೆ ಪಡೆಯುವ ಮೂಲಕ ಶೆಟ್ಟರ್ ಬೆಳಗಾವಿಯಲ್ಲಿ ತಾತ್ಕಾಲಿಕ ಅಡ್ರೆಸ್ ಹೊಂದಿದ್ದಾರೆ. ಮನೆಯನ್ನು ಯಾರ ಹೆಸರಲ್ಲಿ, ಎಷ್ಟು ತಿಂಗಳಿಗೆ ಬಾಡಿಗೆ ಹಿಡಿದಿದ್ದಾರೆ, ತಿಂಗಳ ಬಾಡಿಗೆ ಎಷ್ಟು ಎನ್ನುವುದು ಇನ್ನಷ್ಟೆ ತಿಳಿಯಬೇಕಿದೆ.

ಮಂಗಳವಾರ ಪೂಜೆಯ ಸಂದರ್ಭದಲ್ಲಿ ಸಂಸದೆ ಮಂಗಲಾ ಅಂಗಡಿ ಮತ್ತು ಅವರ ಕುಟುಂಬದ ಸದಸ್ಯರು ಇದ್ದರು.

Related Articles

Back to top button