ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೆಹಲಿಯಲ್ಲಿ ಒಂದು ವಾರ ಲಾಕ್ ಡೌನ್ ವಿಸ್ತರಣೆಯಾದ ಬೆನ್ನಲ್ಲೇ ರಾಜ್ಯದಲ್ಲೂ ಒಂದು ವಾರ ಲಾಕ್ ಡೌನ್ ಜಾರಿ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾತು ಕೇಳಿಬರುತ್ತಿದೆ. ಈ ನಡುವೆ ಸಚಿವ ಜಗದೀಶ್ ಶೆಟ್ಟರ್ ಲಾಕ್ ಡೌನ್ ಸುಳಿವು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಲಾಕ್ ಡೌನ್ ಜಾರಿ ಮಾಡಲೇಬೇಕು ಎಂಬ ಅಭಿಪ್ರಾಯ ನಮ್ಮದಲ್ಲ ಆದರೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾ ಚೈನ್ ಲಿಂಕ್ ಕಟ್ ಮಾಡಬೇಕೆಂದರೆ ಕಠಿಣ ನಿಯಮಗಳನ್ನು ಹಾಕುವುದು ಅನಿವಾರ್ಯ. ಹಾಗಾಗಿ ಇನ್ನಷ್ಟು ಕಠಿಣ ನಿಯಮ ಜಾರಿಗೆ ತಂದರೆ ಸೋಂಕು ನಿಯಂತ್ರಣ ಸಾಧ್ಯ ಎಂದರು.
ಈ ಹಿಂದೆ ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ಮೂರು ತಿಂಗಳು ಲಾಕ್ ಡೌನ್ ಜಾರಿ ಮಾಡಿದ್ದೆವು. ಆದರೆ ಈಗ ಅಷ್ಟು ದೊಡ್ಡ ಸಮಯದವರೆಗೆ ಮಾಡಬೇಕಿಲ್ಲ. ನಮ್ಮ ಮುಂದಿರುವುದು ಇನ್ನು ಕೇವಲ 10 ದಿನಗಳ ಪ್ರಶ್ನೆ. ಕನಿಷ್ಟ ಮೇ 4ರವರೆಗಾದರೂ ಕಠಿಣ ಕ್ರಮ ಮುಂದುವರೆದರೆ ಕೊರೊನಾ ಹರಡುವ ವೇಗ ಸ್ವಲ್ಪ ಮಟ್ಟಿಗೆ ತಗ್ಗಬಹುದು. ಮುಂದಿನ ನಿರ್ಧಾರವನ್ನು ಆನಂತರ ತೀರ್ಮಾನಿಸಬಹುದು. ಈಗ ಹೆಚ್ಚುತ್ತಿರುವ ಸೋಂಕಿನ ಪ್ರಕರಣ, ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ನಾಳಿನ ಸಚಿವ ಸಂಪುಟ ಸಭೆಯಲ್ಲಿ ಲಾಕ್ ಡೌನ್ ಬಗ್ಗೆ ಚರ್ಚೆ ನಡೆಸಲಾಗುವುದು. ಈ ಬಗ್ಗೆ ಸಿಎಂ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಸೋಮವಾರದಿಂದ ಇನ್ನಷ್ಟು ಕಠಿಣ ನಿರ್ಧಾರ?
ಒಂದೇ ಕುಟುಂಬದ 33 ಸದಸ್ಯರಿಗೆ ಕೊರೊನಾ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ