Kannada NewsKarnataka NewsLatestPolitics

*ಫೈರಿಂಗ್ ವೇಳೆ ಜನಾರ್ಧನ ರೆಡ್ಡಿ ನಿವಾಸದ ಕಿಟಕಿ ಗಾಜು ಪುಡಿ ಪುಡಿ; ರೆಡ್ದಿ ಮನೆಯಲ್ಲಿ ಎರಡು ಗುಂಡುಗಳು ಪತ್ತೆ*

ಪ್ರಗತಿವಾಹಿನಿ ಸುದ್ದಿ: ಬ್ಯಾನರ್ ಕಟ್ಟುವ ವಿಚಾರವಾಗಿ ಆರಂಭವಾದ ಘರ್ಷಣೆಯಲ್ಲಿ ಗುಂಡಿನ ದಾಳಿ ನಡೆದು ಕಾಂಗ್ರೆಸ್ ಕಾರ್ಯಕರ್ತನೋರ್ವ ಬಲಿಯಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದ್ದು, ಇದೇ ಘಟನೆಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಮನೆ ಮೇಲೂ ಗುಂಡಿನ ದಾಳಿ ನಡೆದಿದೆ ಎಂಬುದು ಬಹಿರಂಗವಾಗಿದೆ.

ಶಾಸಕ ಜನಾರ್ಧನ ರೆಡ್ಡಿ ಅವರ ಅವಂಬಾವಿಯಲ್ಲಿರುವ ನಿವಾಸದ ಬಳಿ ರಾತ್ರಿ ನಡೆದ ಘರ್ಷಣೆ ಗಲಾಟೆ ವೇಳೆ ಫೈರಿಂಗ್ ನಡೆದಿದ್ದು, ಜನಾರ್ಧನ ರೆಡ್ಡಿ ಅವರ ನಿವಾಸದತ್ತ ಗುಂಡಿನ ದಾಳಿ ನಡೆದಿದೆ. ರೆಡ್ದಿ ನಿವಾಸದ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಮನೆಯಂಗಳದಲ್ಲಿ ಹಾಗೂ ಮನೆಯ ಒಳಗೆ ಎರಡು ಗುಂಡುಗಳು ಪತ್ತೆಯಾಗಿವೆ.

ಈ ಬಗ್ಗೆ ಶಾಸಕ ಜನಾರ್ಧನ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮಾಧ್ಯಮಗಳಿಗೆ ಎರಡು ಬುಲೆಟ್ ಗಳನ್ನು ಪ್ರದರ್ಶಿಸಿದ್ದಾರೆ. ನಿನ್ನೆ ರಾತ್ರಿ ನಡೆದ ಫೈರಿಂಗ್ ನಲ್ಲಿ ರಾತ್ರಿ ಒಂದು ನಮ್ಮ ಮನೆಯಲ್ಲಿ ಒಂದು ಬುಲೆಟ್ ಪತ್ತೆಯಾಗಿತ್ತು, ಇಂದು ಪರಿಶೀಲನೆ ನಡೆಸಿದಾಗ ಮತ್ತೊಂದು ಬುಲೆಟ್ ಪತ್ತೆಯಾಗಿದೆ. ನನ್ನನ್ನೇ ಟಾರ್ಗೆಟ್ ಮಾಡಿ ಗುಂಡಿನ ದಾಳಿ ನಡೆಸಿದ್ದಾರೆ. ಒಟ್ಟು ಎಂಟು ಸುತ್ತು ಫೈರಿಂಗ್ ಮಾಡಿರುವುದ ವಿಡಿಯೋ ಲಭ್ಯವಾಗಿದೆ. ಸತೀಶ್ ರೆಡ್ಡಿ ಗನ್ ಮ್ಯಾನ್ ಫೈರೈರಿಂಗ್ ಮಾಡಿದ್ದಾಗಿ ಆರೋಪಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button