Latest

ನಗರಸಭೆ ಸದಸ್ಯನ ಬರ್ಬರ ಹತ್ಯೆ

ಪ್ರಗತಿವಾಹಿನಿ ಸುದ್ದಿ; ಹಾಸನ: ನಗರಸಭೆ ಜೆಡಿಎಸ್ ಸದಸ್ಯರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಹಾಸನ ಜಿಲ್ಲೆಯೇ ಬೆಚ್ಚಿ ಬಿದ್ದಿದೆ.

ಕೌನ್ಸಿಲರ್ ಪ್ರಶಾಂತ್ ಎಂಬುವವರನ್ನು ಹಾಸನದ ಜವೇನಹಳ್ಳಿ ಮಠದ ಬಳಿ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ.

ತಡರಾತ್ರಿ ಮನೆಗೆ ಹೋಂಡಾ ಆಕ್ಟಿವಾದಲ್ಲಿ ಹೋಗುತ್ತಿದ್ದಾಗ ಆಟೋದಲ್ಲಿ ಬಂದ4-5 ಜನ ದುಷ್ಕರ್ಮಿಗಳು ಪ್ರಶಾಂತ್ ನನ್ನು ಕೊಚ್ಚಿ ಕೊಲೆಗೈದಿದ್ದಾರೆ.

ಜೆಡಿಎಸ್ ಸದಸ್ಯನ ಹತ್ಯೆ ಬೆನ್ನಲ್ಲೇ ಶಾಸಕ ಹೆಚ್.ಡಿ.ರೇವಣ್ಣ ಕೆಂಡಾಮಂಡಲರಾಗಿದ್ದು, ಎಸ್ ಪಿ ಶ್ರೀನಿವಾಸ್ ಗೌಡ ಅವರನ್ನು ಹೆಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಸರ್ಕಲ್ ಇನ್ಸ್ ಪೆಕ್ಟರ್ ರೇಣುಕಾಪ್ರಸಾದ್ ಗೆ ನೋಟೀಸ್ ನೀಡಲಾಗಿದೆ.

Home add -Advt

ಈ ನಡುವೆ ಪ್ರಕರಣದ ತನಿಖೆ ಮುಗಿಯುವವರೆಗೂ ಡಿವೈ ಎಸ್ ಪಿ ಉದಯ್ ಭಾಸ್ಕರ್, ಸಿಪಿಐ ಆರೋಕಿಯಪ್ಪ, ಸರ್ಕಲ್ ಇನ್ಸ್ ಪೆಕ್ಟರ್ ರೇಣುಕಾಪ್ರಸಾದ್ ಅವರನ್ನು ರಜೆ ಮೇಲೆ ತೆರಳುವಂತೆ ಸೂಚಿಸಲಾಗಿದೆ.
ಗೋಕಾಕ್: ನಡೆದು ಹೋಗುತ್ತಿದ್ದವನನ್ನು ಕಲ್ಲಿನಿಂದ ಹೊಡೆದು ಕೊಂದ ದುಷ್ಕರ್ಮಿಗಳು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button