Uncategorized

*CMO ಅಂದರೆ ಈಗ Corruption Management Office ಆಗಿದೆ; ಮುಖ್ಯಮಂತ್ರಿಗಳಿಂದಲೇ ಶಿಫಾರಸ್ಸಿನ ಟಿಪ್ಪಣಿಗಳ ಬಿಕರಿ ಎಂದು ಸಾಕ್ಷ್ಯ ನೀಡಿದ JDS*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸರ್ಕಾರದಿಂದ ವರ್ಗಾವಣೆ ದಂಧೆ ನಡೆದಿದೆ ಎಂದು ಆರೋಪಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮರಸ್ವಾಮಿ ಆರೋಪಕ್ಕೆ ಜೆಡಿಎಸ್ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ವರ್ಗಾವಣೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಟ್ವೀಟ್ ಮೂಲಕ ಕಿಡಿಕಾರಿದೆ.

ಇದು ಪಾರದರ್ಶಕವಷ್ಟೇ ಅಲ್ಲ, ‘ಅಪಾರ’ದರ್ಶಕ ಆಡಳಿತಕ್ಕೆ ಹಿಡಿದ ಕನ್ನಡಿ! ಏಕೆಂದರೆ, ಮುಖ್ಯಮಂತ್ರಿಗಳಿಂದಲೇ ನಡೆಯುವ ವರ್ಗಾವಣೆ, ಶಿಫಾರಸ್ಸಿನ ಟಿಪ್ಪಣಿಗಳ ಬಿಕರಿಗೆ ಇಲ್ಲಿದೆ ಇನ್ನೊಂದು ಸಾಕ್ಷ್ಯ, ಅಲ್ಲಿನವರಿಗೆ ಇದೇ ಪಂಚಭಕ್ಷ್ಯ ಎಂದು ವರ್ಗಾವಣೆ ಆದೇಶ ಮತ್ತು ಹಿಂಪಡೆದ ಪತ್ರದ ಸಮೇತ ಟ್ವೀಟ್ ಮಾಡಿದೆ.

CMO ಅಂದರೆ @CMofKarnataka ಎಂದುಕೊಂಡಿದ್ದ ಕನ್ನಡಿಗರಿಗೆ ಅದು ಈಗ Corruption Management Office ಆಗಿದೆ ಎನ್ನುವುದು ಅರ್ಥವಾಗಿದೆ. ಕಾರಣವಿಷ್ಟೇ; ಅಲ್ಲಿ YstTax ಪಾವತಿ ಆಗದಿದ್ದರೆ ವರ್ಗಾವಣೆ ಆದೇಶಗಳೆಲ್ಲ ಮುಲಾಜಿಲ್ಲದೆ ಕಸದ ಬುಟ್ಟಿ ಸೇರುತ್ತವೆ.

ವಿಶೇಷ ಸೂಚನೆ: ವರ್ಗಾವಣೆ ಆದೇಶದ ದಿನವೇ ಅದು ಕೈಗೆ ಸಿಗಬೇಕಾದರೆ YstTax ಕಡ್ಡಾಯ. ಇಲ್ಲವಾದರೆ ತಪ್ಪಿದ್ದಲ್ಲ ಅನ್ಯಾಯ!! ಕೈ ಬೆಚ್ಚಗೆ ಆಗದಿದ್ದರೆ ವರ್ಗಾವಣೆ ಆದೇಶದ ಪ್ರತಿ ನೇರ ಕಸದ ಬುಟ್ಟಿಗೆ ಹೋಗುವುದು ಗ್ಯಾರಂಟಿ!!! ಕಾಸಿಗಾಗಿ ಹುದ್ದೆ ಇದು ಕಾಂಗ್ರೆಸ್ ನ 6ನೇ ಗ್ಯಾರಂಟಿ ಎಂದು ಟೀಕಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button