Kannada NewsLatest

ಬೆಳಗಾವಿಯ ಚಿಕ್ಕೋಡಿಯಲ್ಲಿಯೂ ಜೇಮ್ಸ್ ಸಂಭ್ರಮ; ಅಭಿಮಾನಿಗಳಿಂದ ಉಪಹಾರ ವ್ಯವಸ್ಥೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ದಿ.ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆ ಚಿತ್ರ ಜೇಮ್ಸ್ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಚಿತ್ರಮಂದಿರಗಳಲ್ಲಿ ಅಪ್ಪು ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲುಮುತಿದೆ.

ಜೇಮ್ಸ್ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ವಿಶೇಷವಾಗಿ ಸ್ವಾಗತಿಸಿದ್ದಾರೆ. ಹಲವೆಡೆ ಅಭಿಮಾನಿಗಳು ರಕ್ತದಾನ, ನೇತ್ರದಾನ ನೋಂದಣಿ ಆಯೋಜಿಸಿದ್ದರೆ, ಇನ್ನು ಹಲವೆಡೆಗಳಲ್ಲಿ ಚಿತ್ರಮಂದಿರದ ಬಳಿ ಊಟ, ಉಪಹಾರ ವ್ಯವಸ್ಥೆ ಮಾಡಿ ಸಂಭ್ರಮಿಸಿದ್ದಾರೆ.

Home add -Advt

ಬೆಳಗಾವಿ ಜಿಲ್ಲೆಯಲ್ಲಿಯೂ ಜೇಮ್ಸ್ ವೀಕ್ಷಣೆಗೆ ಅಭಿಮಾನಿಗಳು ಥಿಯೇಟರ್ ಗಳಿಗೆ ಮುಗಿಬಿದ್ದಿದ್ದು, ಚಿಕ್ಕೋಡಿಯ ತಾಲೂಕಿನ ಅಂಕಲಿ ಪಟ್ಟಣದ ಮಯೂರ ಚಿತ್ರಮಂದಿರದಲ್ಲಿ ಅಭಿಮಾನಿಗಳಿಂದ ಉಪಹಾರ ವಿತರಿಸಲಾಗಿದೆ.

ಅಭಿಮಾನಿಗಳು 400 ಜನರಿಗೆ ಉಪಹಾರ ವಿತರಿಸಿದ್ದು, ಮತ್ತೊಂದೆಡೆ ಚಿತ್ರಮಂದಿರದ ಎದುರು ಅಪ್ಪು ಕಟೌಟ್ ಗೆ ಪೂಜೆ ಸಲ್ಲಿಸಿ, ಪಟಾಕಿಸಿಡಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಪುನೀತ್ ರಾಜ್ ಕುಮಾರ್ ಗೆ ಶೀಘ್ರದಲ್ಲಿಯೇ ‘ಕರ್ನಾಟಕ ರತ್ನ’ ಪ್ರದಾನ; ಸಿಎಂ ಘೋಷಣೆ

Related Articles

Back to top button