Kannada NewsKarnataka NewsLatest

ಬೆಳಗಾವಿ ಹೊಟೇಲ್ ರೂಂನಲ್ಲಿ ವಜ್ರದ ಬಳೆ ಕಳುವು: ದೂರು ನೀಡಿದ ಮಹಿಳೆ

ಪ್ರಗತಿ ವಾಹಿನಿ ಸುದ್ದಿ ಬೆಳಗಾವಿ – 

ಬೆಳಗಾವಿಯ ಕಾಕತಿಯಲ್ಲಿರುವ ಮ್ಯಾರಿಯೆಟ್ ಹೊಟೇಲ್‌ನಲ್ಲಿ ತಂಗಿದ್ದ ಮಹಿಳೆಯೊಬ್ಬರ ಲಕ್ಷಾಂತರ ರೂ. ಮೌಲ್ಯದ ವಜ್ರದ ಬಳೆ ಕಳುವಾಗಿದೆ.

Home add -Advt

ಹರಿಯಾಣಾ ಗುರಗಾಂವ್ ಮೂಲದ ಶಿಪ್ರಾ ಬಿಜಾವತ್ ಅವರು ಸಕ್ಕರೆ ಕಾರ್ಖಾನೆಗಳ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದು ಕೆಲಸದ ನಿಮಿತ್ತ ಬೆಳಗಾವಿಗೆ ಮಂಗಳವಾರ ಬೆಳಗ್ಗೆ ಬಂದಿದ್ದರು. ಮ್ಯಾರಿಯೇಟ್ ಹೊಟೇಲ್‌ನಲ್ಲಿ ರೂಂ ಪಡೆದ ಅವರು ರೂಮಿನಲ್ಲಿ ತಮ್ಮ ಲಗೇಜ್ ಇಟ್ಟು ಕೆಲಸದ ನಿಮಿತ್ತ ಹೊರಗೆ ತೆರಳಿದ್ದರು.

ಬೆಳಗ್ಗೆ ೧೧ ಗಂಟೆಯ ಸುಮಾರಿಗೆ ರೂಮಿನಿಂದ ಹೊರಗೆ ಹೋಗಿದ್ದ ಅವರು ರಾತ್ರಿ ೧೦.೩೦ರ ಸುಮಾರಿಗೆ ವಾಪಸ್ ರೂಮಿಗೆ ಬಂದಾಗ ಶಿಪ್ರಾ ಅವರ ಬ್ಯಾಗ್ ತೆರೆದ ಸ್ಥಿತಿಯಲ್ಲಿತ್ತು. ಅಲ್ಲದೇ ಬೆಡ್‌ಶೀಟ್ ಮುದುಡಿರುವುದು ಮತ್ತು ಟವೆಲ್ ಸಹ ಒದ್ದೆಯಾಗಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ಶಿಪ್ರಾ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿದ್ದ ವಜ್ರದ ಹರಳಿನ ಬಳೆ ಕಾಣೆಯಾಗಿರುವ ಸಂಗತಿ ಗೊತ್ತಾಗಿದೆ.

ಕೂಡಲೇ ಹೊಟೇಲ್ ಸಿಬ್ಬಂದಿಯನ್ನು ವಿಚಾರಿಸಲಾಗಿ ಅವರು ಈ ರೀತಿ ಆಗಲು ಸಾಧ್ಯವಿಲ್ಲ ಎಂದು ವಾದ ಮಾಡಿದ್ದಾರೆ. ಆದರೆ ಶಿಪ್ರಾ ಅವರು ಹೊಟೇಲ್ ಸಿಸಿ ಟಿವಿ ಫುಟೇಜ್ ಪರಿಶೀಲಿಸುವಂತೆ ಒತ್ತಾಯಿಸಿದಾಗ ಸಿಸಿಟಿವಿ ಪೂಟೇಜ್ ವೀಕ್ಷಿಸಲಾಗಿ ಅದರಲ್ಲಿ ಮಧ್ಯಾಹ್ನ ೩ ಗಂಟೆಯ ಸುಮಾರಿಗೆ ಓರ್ವ ಮಹಿಳೆ ಹಾಗೂ ಓರ್ವ ಪುರುಷ ಶಿಪ್ರಾ ಅವರ ರೂಮಿಗೆ ಪ್ರವೇಶಿಸಿದ್ದು ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ಶಿಪ್ರಾ ಅವರು ಕಾಕತಿ ಪೊಲೀಸ್ ಠಾಣೆಯಲ್ಲಿ ಹೊಟೇಲ್ ವಿರುದ್ಧ ದೂರು ನೀಡಿದ್ದಾರೆ.

ಚಿನ್ನ-ಬೆಳ್ಳಿ ಇಂದಿನ ದರ ಎಷ್ಟು ಗೊತ್ತೇ?

 

Related Articles

Back to top button