Latest

ಭೀಕರ ಅಪಘಾತ; ಲಾರಿ ಚಾಲಕ ಸಜೀವ ದಹನ

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಜಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಟೈಯರ್ ಬ್ಲಾಸ್ಟ್ ಆಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಚಾಲಕ ಸಜೀವ ದಹನಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ.

ದಿನೇಶ್ ಸಜೀವ ದಹನಗೊಂಡ ಲಾರಿ ಚಾಲಕ. ಬಿಡದಿಯಿಂದ ಮೈಸೂರಿನತ್ತ ಜಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಟೈರ್ ಮದ್ದೂರು ಬಳಿ ಏಕಾಏಕಿ ಸ್ಫೋಟಗೊಂಡಿದ್ದು, ಎಲ್ ಐಸಿ ಕಚೇರಿ ಬಳಿ ಕಂಬಕ್ಕೆ ಡಿಕ್ಕಿಹೊಡೆದಿದೆ. ಡಿಕ್ಕಿ ರಭಸಕ್ಕೆ ಲಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಲಾರಿ ಚಾಲಕ ಹೊರ ಬರಲಾಗದೇ ಸಜೀವ ದಹನಗೊಂಡಿದ್ದಾರೆ.

Home add -Advt

ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳು ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ.

Related Articles

Back to top button