Kannada NewsKarnataka NewsLatest

*ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ನಾಳೆ ಬೃಹತ್ ಉದ್ಯೋಗಮೇಳ*

ಪ್ರಗತಿವಾಹಿನಿ ಸುದ್ದಿ: ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣಾವಕಾಶ. ಕರಾವಳಿ ಭಾಗದ ಜನರಿಗೆ ಉದ್ಯೋಗ ಬಯಸುವವರುಗೆ ಇದೊಂದು ಉತ್ತಮ ಅವಕಾಶ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಏಪ್ರಿಲ್ 22 ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ನೇರ ಸಂದರ್ಶನ ನಡೆಯಲಿದ್ದು, ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ನೇತೃತ್ವದಲ್ಲಿ ಈ ಪ್ರಕ್ರಿಯೆ ನಡೆಯಲಿದೆ.

ಈ ಬಾರಿಯ ಉದ್ಯೋಗ ಮೇಳದಲ್ಲಿ ಪ್ರಮುಖವಾಗಿ ಎರಡು ಸಂಸ್ಥೆಗಳು ಭಾಗವಹಿಸುತ್ತಿವೆ. ಮೊದಲನೆಯದಾಗಿ, ಪ್ರಸಿದ್ಧ ರಿಟೇಲ್ ಸಂಸ್ಥೆಯಾದ ‘ಮೈ ಜಿ ಫ್ಯೂಚರ್’ (My G Future) ಕಂಪನಿಯು ಮ್ಯಾನೇಜ್‌ಮೆಂಟ್ ಮತ್ತು ಸೇಲ್ಸ್ ವಿಭಾಗದಲ್ಲಿ ಹಲವು ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

ಎರಡನೆಯದಾಗಿ, ಸಾಮಾಜಿಕ ಸೇವೆಯಲ್ಲಿ ತೊಡಗಿರುವ ‘ಅಕ್ಷಯಪಾತ್ರ ಫೌಂಡೇಶನ್’ ಸಂಸ್ಥೆಯು ತಾಂತ್ರಿಕ ಮತ್ತು ಅಡುಗೆ ವಿಭಾಗದ ಸಿಬ್ಬಂದಿಗಳ ನೇಮಕಾತಿ ನಡೆಯಲಿದೆ.

ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮೈ ಜಿ ಫ್ಯೂಚರ್ ಸಂಸ್ಥೆಯಲ್ಲಿ ಬ್ಯುಸಿನೆಸ್ ಮ್ಯಾನೇಜರ್, ಬಿಲ್ಲಿಂಗ್ ಎಕ್ಸಿಕ್ಯೂಟಿವ್, ಶೋ ರೂಮ್ ಸೇಲ್ಸ್ ಮತ್ತು ಕಸ್ಟಮರ್ ಸರ್ವಿಸ್ ವಿಭಾಗಗಳಲ್ಲಿ ಕೆಲಸ ಮಾಡಲು ಪದವಿ ಅಥವಾ ಪಿಯುಸಿ ಮುಗಿಸಿದವರಿಗೆ ಆದ್ಯತೆ ನೀಡಲಾಗುತ್ತದೆ. ಇನ್ನು ಅಕ್ಷಯಪಾತ್ರ ಫೌಂಡೇಶನ್‌ನಲ್ಲಿ ಚಾಲಕರು, ಹೆಲ್ಪರ್ ಹಾಗೂ ಅಡುಗೆ ಕೆಲಸಗಾರರ ಹುದ್ದೆಗಳಿದ್ದು, ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರು ಈ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ.

ನೇರ ಸಂದರ್ಶನ ನಡೆಯುವ ಸ್ಥಳ:
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕೊಠಡಿ ಸಂಖ್ಯೆ 4, ನೆಲಮಹಡಿ, ಜಿಲ್ಲಾಡಳಿತ ಕಟ್ಟಡ, ಪಡಿಲ್, ಮಂಗಳೂರು
ಸಂಪರ್ಕ ಸಂಖ್ಯೆ: 0824-2457139

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button