Belagavi NewsBelgaum NewsKannada NewsKarnataka NewsLatestSports

*ಎಂಪಿ ಟ್ರೋಪಿ ಕಬಡ್ಡಿ ಪಂದ್ಯಾವಳಿಗಳಿಗೆ ಜೊಲ್ಲೆ ಗ್ರುಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಚಾಲನೆ*

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಗಡಿಭಾಗದ ಎಲ್ಲ ಯುವಕರಿಗೆ, ಪ್ರತಿಭಾವಂತರಿಗೆ, ಕ್ರೀಡಾಪಟುಗಳಿಗೆ ಸದಾ ಪ್ರೋತ್ಸಾಹಿಸುವ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಯಕ್ಸಂಬಾದ ಜೊಲ್ಲೆ ಗ್ರುಪ್  ಸಂಸದ ಅಣ್ಣಾಸಾಹೇಬ ಜೊಲ್ಲೆ ಇವರ ಹೆಸರಿನಲ್ಲಿ ಎಂ.ಪಿ ಟ್ರೋಪಿ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು  ಜೊಲ್ಲೆ ಗ್ರುಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಹೇಳಿದರು. 


ತಾಲೂಕಿನ ಯಕ್ಸಂಬಾ ಪಟ್ಟಣದ ಶಿವಶಂಕರ ಜೊಲ್ಲೆ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಚಿಕ್ಕೋಡಿ-ಸದಲಗಾ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಸಂಸದ ಅಣ್ಣಾಸಾಹೇಬ ಜೊಲ್ಲೆ ಎಂಪಿ ಟ್ರೋಪಿ ಕಬಡ್ಡಿ ಪಂದ್ಯಾವಳಿಗಳನ್ನು ಉದ್ಘಾಟಿಸಿ ಮಾತನಾಡುತ್ತಾ  ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ೮ ವಿಧಾನಸಭಾ ಮತಕ್ಷೇತ್ರಗಳಲ್ಲಿ ಈ ರೀತಿ ಪಂದ್ಯಾವಳಿಗಳನ್ನ ಆಯೋಜಿಸಿದ್ದು ಪ್ರತಿ ಕ್ಷೇತ್ರದಲ್ಲಿಯೂ ಸುಮಾರು ೧೦೦ ಕ್ಕೂ ಹೆಚ್ಚು ಪುರುಷ ಹಾಗೂ ಮಹಿಳಾ ತಂಡಗಳು ಭಾಗವಹಿಸಿ ಯಶಸ್ವಿಗೊಳಿಸಿವೆ. ಅದೇ ರೀತಿಯಾಗಿ ಚಿಕ್ಕೋಡಿ ಕ್ಷೇತ್ರದ ಯುವಕ-ಯುವತಿಯರು ಭಾಗವಹಿಸಿದ್ದು ಸಂತೋಷ ತಂದಿದೆ. ಮುಂಬರುವ ದಿನಗಳಲ್ಲಿ ನಿಪ್ಪಾಣಿಯಲ್ಲಿ ಬೃಹತ್ ಗಾಳೀಪಟ ಉತ್ಸವದಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಿವೆ ಎಂದರು.


ದಿವ್ಯಸಾನಿಧ್ಯವಹಿಸಿಕೊAಡಿದ ಖಡಕಲಾಟ ವೀರಕ್ತಮಠದ ಶ್ರೀ ಶಿವಬಸವ ಮಹಾಸ್ವಾಮೀಜಿ ಮಾತನಾಡಿ ಯುವಕರಿಗೆ ದುಶ್ಚಟಗಳಿಂದ ದೂರವಿರಿಸಿ ಸಧೃಢ ಸಮಾಜ ನಿರ್ಮಾಣಮಾಡಲು ದೇಶಿಕ್ರೀಡೆಯಾದ ಕಬ್ಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಿರುವ ಜೊಲ್ಲೆ ಗ್ರೂಪ್ ಕಾರ್ಯ ಶ್ಲಾಘನೀಯವೆಂದರು. 


ಈ ಸಂದರ್ಭದಲ್ಲಿ ಚಿಕ್ಕೋಡಿ ಸದಲಗಾ ಕ್ಷೇತ್ರದ ಬಿಜೆಪಿ ಮಂಡಳ ಅಧ್ಯಕ್ಷ ಸಂಜಯ ಪಾಟೀಲ, ಶ್ರೀ ಬೀರೇಶ್ವರ ಸಹಕಾರಿ ಸಂಸ್ಥೆಯ ಅಧ್ಯಕ್ಷ ಜಯಾನಂದ ಜಾಧವ ಮಾತನಾಡಿದರು.


ಹೊನಲು ಬೆಳಿಕಿನ ಪಂದ್ಯಾವಳಿಗಳಲ್ಲಿ ೫೫ ಪುರುಷ ತಂಡಗಳು ಹಾಗೂ ೧೪ ಮಹಿಳಾ ತಂಡಗಳು ಭಾಗವಹಿಸಿದ್ದವು. ಪಂದ್ಯಾವಳಿಗಳನ್ನು ವೀಕ್ಷಿಸಲು ಸಾವಿರಾರು ಜನರು ಕಿಕ್ಕಿರೀದು ತುಂಬಿದ್ದರು, ಬಸವಪ್ರಸಾದ ಜೊಲ್ಲೆ ಗ್ಯಾಲರಿಯಲ್ಲಿ ಕುಳಿತು ಪಂದ್ಯಾವಳಿಗಳನ್ನು ವೀಕ್ಷಿಸಿ ಜನಮನ ಸೆಳೆದರು.   


ವೇದಿಕೆ ಮೇಲೆ ಜ್ಯೋತಿಪ್ರಸಾದ ಜೊಲ್ಲೆ, ಶಿವರಾಜ ಜೊಲ್ಲೆ, ಕಲ್ಲಪ್ಪಾ ಜಾಧವ, ಅಪ್ಪಾಸಾಹೇಬ ಜೊಲ್ಲೆ, ಅನ್ವರ ದಾಡಿವಾಲೆ, ಉಮಾಯಿನ ಪಟೇಲ, ಸಂಜಯ ಪೂಜಾರಿ, ವಿಜಯ ರಾವುತ್, ಡಾ ಮಲ್ಲಿಕಾರ್ಜುನ ಪೊಗತ್ಯಾನಟ್ಟಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button