Kannada NewsKarnataka NewsLatest

*ತಮ್ಮನ್ನು ವರ್ಗಾವಣೆ ಮಾಡುವಂತೆ ಮೊರೆ ಹೋದ ಒಂದೇ ಠಾಣೆಯ 36 ಪೊಲೀಸ್ ಸಿಬ್ಬಂದಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಒಂದೇ ಪೊಲೀಸ್ ಠಾಣೆಯ ಬರೋಬ್ಬರಿ 36 ಪೊಲೀಸ್ ಸಿಬ್ಬಂದಿಗಳು ತಮ್ಮನ್ನು ಬೇರೆಡೆ ವರ್ಗಾವಣೆ ಮಾಡುವಂತೆ ಮನವಿ ಮಾಡಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ 36 ಸಿಬ್ಬಂದಿಗಳು ಸಾಮೂಹಿಕ ವರ್ಗಾವಣೆಗಾಗಿ ಮೊರೆ ಇಟ್ಟಿದ್ದಾರೆ. ಈ ಘಟನೆ ಗೃಹ ಇಲಾಖೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

Home add -Advt

ಕಬ್ಬನ್ ಪಾರ್ಕ್ ಠಾಣೆಯ 12 ಎ ಎಸ್ ಐ ಹಾಗೂ 24 ಹೆಡ್ ಕಾನ್ಸ್ ಟೇಬಲ್ ಗಳು ಸೇರಿದಂತೆ 36 ಸಿಬ್ಬಂದಿಗಳು ವರ್ಗಾವಣೆ ಮಾಡುವಂತೆ ಕೇಳಿಕೊಂಡಿದ್ದಾರೆ. ಠಾಣಾಧಿಕಾರಿ ಗಿರೀಶ್ ಅವರಿಂದ ಬೇಸತ್ತು ಸಿಬ್ಬಂದಿಗಳು ಈ ರೀತಿ ಮೊರೆ ಇಟ್ಟಿದ್ದರಾ ಎಂಬ ಪ್ರಶ್ನೆಯೂ ಮೂಡಿದೆ. ಸದ್ಯ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಗಿರೀಶ್ ಅವರಿಂದ ಬೇಸರಗೊಂಡು ಠಾಣೆಯ ಸಿಬ್ಬಂದಿಗಳು ವರ್ಗಾವಣೆಗೆ ಮನವಿ ಮಾಡಿದ್ದಾರಾ? ಎಂಬ ಚರ್ಚೆಗೆ ಕಾರಣವಾಗಿದೆ.


Related Articles

Back to top button