ಪ್ರತಿಭಟನೆಗೆ ಬರುವ ವೇಳೆ ಅಪಘಾತಕ್ಕೀಡಾದವರ ಕುಟುಂಬಕ್ಕೆ ನೆರವು
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ವಾಪಸ್ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಲು ಬರುವ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಲ್ಲದೆ ಓರ್ವ ಸ್ವಾಮೀಜಿ ಗಾಯಗೊಂಡಿದ್ದರು.
ಗುರುವಾರ ವಿಶ್ವಹಿಂದೂ ಪರಿಷತ್ ಮುಖಂಡರು ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮೃತರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಅಲ್ಲದೆ ನೆರವಿನ ಚೆಕ್ ವಿತರಿಸಿದರು.
ಭೀಕರ ಅಪಘಾತದಲ್ಲಿ ಕೊಲ್ಲಾಪುರದ ಪಾಂಡುರಂಗ ಜಾಧವ (75) ಹಾಗೂ ಹುಕ್ಕೇರಿ ಪರಕನಟ್ಟಿಯ ಪಂಚಾಕ್ಷರಿ ಹಿರೇಮಠ ( 26 ) ಸ್ಥಳದಲ್ಲೆ ಮೃತಪಟ್ಟಿದ್ದರು.
ಮೃತರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಇದೇ ವೇಳೆ ಮೃತರ ಕುಟುಂಬಕ್ಕೆ ತಲಾ 75 ಸಾವಿರ ಸಹಾಯಧನ ವಿತರಿಸಲಾಯಿತು.
ಇದೇ ವೇಳೆ ಅಪಘಾತದಲ್ಲಿ ಗಾಯಗೊಂಡಿದ್ದ ಸ್ವಾಮೀಜಿಗೆ 50 ಸಾವಿರ ರೂ ವಿತರಿಸಿದರು. ಈ ವೇಳೆ ಶಿವಮೊಗ್ಗ ವಿಶ್ವ ಹಿಂದುಪರಿಷತ್ ಮತ್ತು ಬೆಳಗಾವಿ ಜಿಲ್ಲೆಯ ವಿಶ್ವ ಹಿಂದುಪರಿಷತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ವೇಳೆ ಈಶ್ವರಪ್ಪ ರಾಜ್ಯ ಬಾಜಪದಿಂದ ಸಹಿತ ಎಲ್ಲಾ ಸಹಕಾರ ಕೊಡುವ ಭರವಸೆ ನೀಡಿದರು. ವಿಶ್ವ ಹಿಂದುಪರಿಷತ್ ಶಿವಮೊಗ್ಗ ಅಧ್ಯಕ್ಷ ವಾಸುದೇವ, ಸೆಕ್ರೇಟರಿ ನಾರಾಯಣ ವೆರ್ಣೇಕರ, ಬೆಳಗಾವಿ ಜಿಲ್ಲಾಧ್ಯಕ್ಷ ಶ್ರೀಕಾಂತ ಕದಮ್, ಉಪಾಧ್ಯಕ್ಷ ಪ್ರಮೋದ ಕುಮಾರ ವಕ್ಕುಂದಮಠ, ವಿವೇಕಾನಂದ ಪೂಜಾರ, ಪ್ರಾಂತ ಕೋಶಾಧ್ಯಕ್ಷ ಕೃಷ್ಣ ಭಟ್, ಸಂಜಯ ಪಾಟೀಲ, ಡಾ ರಾಜೇಶ ನೇರ್ಲಿ, ವಿಲಾಸ ಪವಾರ, ಶ್ರೀಮಂತ ಧನಗರ, ಲಕ್ಷ್ಮಣ ತಪಸಿ, ಗೋವಿಂದ ಕೋಪ್ಪದ ಮುಂತಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ