Kannada NewsKarnataka NewsLatestPolitics

*BREAKING: ಚಿತ್ತಾಪುರದಲ್ಲಿ RSS ಪಥಸಂಚಲನ ಆರಂಭ: ಗಣವೇಷಧಾರಿಗಳಿಗೆ ಹೂಮಳೆಗರೆದು ಸ್ವಾಗತಿಸಿದ ಜನರು*

ಪ್ರಗತಿವಾಹಿನಿ ಸುದ್ದಿ: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್.ಎಸ್.ಎಸ್.ಪಥಸಂಚಲನಕ್ಕೆ ರಾಜ್ಯ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಇಂದು ಆರ್.ಎಸ್.ಎಸ್.ಪಥಸಂಚಲನ ಆರಂಭವಾಗಿದೆ.

ನಗರದ ಬಜಾಜ್ ಕಲ್ಯಾಣ ಮಂಟಪದಿಂದ ಆರಂಭವಾದ ಪಥಸಂಚಲನದಲ್ಲಿ 300 ಗಣವೇಷಧಾರಿಗಳು ಹಾಗು 50 ಬ್ಯಾಂಡ್ ಸಿಬ್ಬಂದಿಗಳು ಭಾಗಿಯಾಗಿದ್ದಾರೆ. ಪೊಲೀಸ್ ಬಿಗಿ ಭದ್ರತೆ, ಸಿಸ್ಟಿವ್ ಕಣ್ಗಾವಲಿನಲ್ಲಿ ಆರ್.ಎಸ್.ಎಸ್ ಪಥಸಂಚಲನ ಆರಂಭವಾಗಿದ್ದು, ಮಾರ್ಗದುದ್ದಕ್ಕೂ ಗಣವೇಷಧಾರಿಗಳ ಮೇಲೆ ಹೂಮಳೆಗರೆದು ಜನರು ಸ್ವಾಗತಿಸಿದ್ದಾರೆ.

ಬಜಾಜ ಕಲ್ಯಾಣ ಮಂಟಪದಿಂದ ಆರಂಭವಾದ ಪಥಸಂಚಲನ ಕೆನರಾ ಬ್ಯಾಂಕ್ ಸರ್ಕಲ್, ಎಪಿಎಂಸಿ ಮಾರ್ಗವಾಗಿ ಒಂದೂವರೆ ಕಿ.ಮೀ ಸಾಗಿ ಬಳಿಕ ಮತ್ತೆ ಬಜಾಜ್ ಕಲ್ಯಾಣ ಮಂಟಪಕ್ಕೆ ಬಂದು ತಲುಪಲಿದ್ದು, ಬಳಿಕ ಅಲ್ಲಿ ಸಭೆ ನಡೆಯಲಿದೆ.

Home add -Advt

Related Articles

Back to top button