Kannada NewsKarnataka NewsLatest
*ಸುಪಾರಿ ಕೊಟ್ಟು ಪತಿಯನ್ನೇ ಹತ್ಯೆ ಗೈದ ಪತ್ನಿ: 7 ವರ್ಷಗಳ ಬಳಿಕ ಕೊಲೆ ರಹಸ್ಯ ಬಯಲು*

ಪ್ರಗತಿವಾಹಿನಿ ಸುದ್ದಿ: ಸುಪಾರಿ ಕೊಟ್ಟು ಪತಿಯನ್ನೇ ಪತ್ನಿ ಕೊಲೆಗೈದಿದ್ದು, ಏಳು ವರ್ಷಗಳ ಬಳಿಕ ಕೊಲೆ ರಹಸ್ಯ ಬಯಲಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಕಣ್ಣಿ ಗ್ರಾಮದಲ್ಲಿ ನಡೆದಿದೆ.
ತನ್ನ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಕ್ಕೆ ಸುಪಾರಿ ಕೊಟ್ಟು ಪತಿಯನ್ನು ಕೊಲೆ ಮಾಡಿಸಿದ್ದಾಳೆ. ಬಳಿಕ ಸಹಜ ಸಾವು ಎಂದು ಬಿಂಬಿಸಿ ನಾಟಕವಾಡಿದ್ದಾಳೆ. ಕಣ್ಣಿ ಗ್ರಾಮದ ಭೀರಪ್ಪ ಎಂಬಾತನನ್ನು ಆತನ ಪತ್ನಿ ಶಾಮ್ತಲಾಬಾಯಿ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಳೆ.
ಸುಪಾರಿ ಹಣ ನೀಡದಿದ್ದಾಗ ಏಳು ವರ್ಷಗಳ ಬಳಿಕ ಮಹಿಳೆ ಹಾಗೂ ಸುಪಾರಿ ಪಡೆದ ಆರೋಪಿ ನಡುವೆ ನಡೆದ ಸಂಭಾಷಣೆ, ವಿಡಿಯೋ ವೈರಲ್ ಆಗುತ್ತಿದ್ದಂತೆ ಕೊಲೆ ಪ್ರಕರಣ ಬಯಲಾಗಿದೆ. ಆರೋಪಿ ಮಹೇಶ್ ಹಾಗೂ ಬೀರಪ್ಪ ಇಬ್ಬರು ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಬೀರಪ್ಪ ಸಹೋದರ ಫರಹದಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದೀಗ ಫರಹದಾಬಾದ್ ಪೊಲೀಸರು ಬೀರಪ್ಪನ ಪತ್ನಿ ಶಾಂತಾಬಾಯಿ, ಮಹೇಶ್, ಸುರೇಶ್, ಸಿದ್ದು, ಶಂಕರ್ ಎಂಬುವವರನ್ನು ಬಂಧಿಸಿದ್ದಾರೆ.



